12 ವರ್ಷದ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆ ವ್ಯವಹಾರಕ್ಕೆ ತಳ್ಳಿದ್ದ ಸೋನು ಪಂಜಾಬನ್‌ಗೆ 24 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಸಂದೀಪ್ ಬೆಡ್ವಾಲ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾನವ ಕಳ್ಳಸಾಗಣೆ, ಅಪಹರಣ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಸೋನು ಪಂಜಾಬನ್ ಮತ್ತು ಸಂದೀಪ್ ಬೆಡ್ವಾಲ್ ಗೆ ದೆಹಲಿಯ ದ್ವಾರಕಾ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.
ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ದೆಹಲಿ ಪೊಲೀಸರು ಕೋರ್ಟ್ ಗೆ ಮನವಿ ಮಾಡಿದ್ದರು. ಪ್ರಕರಣ ದೆಹಲಿಯ ಹರೀಶ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಬಾಲಕಿಯನ್ನು ಸೆಪ್ಟೆಂಬರ್ 11, 2009 ರಂದು ಅಪಹರಿಸಲಾಗಿತ್ತು. ಘಟನೆಯ ಸಮಯದಲ್ಲಿ ಆಕೆಯ ವಯಸ್ಸು ಕೇವಲ 12 ವರ್ಷ 10 ತಿಂಗಳು ಮತ್ತು 2 ದಿನಗಳಾಗಿದ್ದವು.
2014ರಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ದೇಹದ ವ್ಯಾಪಾರಕ್ಕೆ ತಳ್ಳಿದ್ದಕ್ಕಾಗಿ ಸೋನು ಪಂಜಾಬನ್ ಮತ್ತು ಆಕೆಯ ಆರು ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.ನಂತ್ರ ಪೊಲೀಸರು ತನಿಖೆ ಶುರು ಮಾಡಿದ್ದರು.