ತಾಯಿ ಹಾಗೂ ಮಗನ ಸಂಬಂಧ ಬಹಳ ಗಟ್ಟಿಯಾದದ್ದು ಎಂದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇರುವ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಇಂಥ ಸಂದರ್ಭಗಳು ವಿರಳವಾಗಿಬಿಡುತ್ತಿವೆ.
ಫೇಸ್ಬುಕ್ ಬಳಕೆದಾರ ಅಭ್ರಾನೀಲ್ ಮಲಾಕಾರ್ ಅವರು 65 ವರ್ಷದ ತಮ್ಮ ತಂದೆ 98 ವರ್ಷದ ಅವರ ಅಜ್ಜಿಯ ಕಾಲಿನ ಉಗುರನ್ನು ಕತ್ತರಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕೂದಲೆಳೆ ಅಂತರದಲ್ಲಿ ತಿಮಿಂಗಿಲದಿಂದ ಪಾರು: ಮೊಬೈಲ್ ನಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ
ತಮ್ಮ ವಯಸ್ಸಾದ ತಾಯಿಯ ಕಾಲಿನ ಉಗುರುಗಳನ್ನು ನೆಲದ ಮೇಲೆ ಕುಳಿತು ಬಹಳ ಆಸ್ಥೆಯಿಂದ ಕತ್ತರಿಸುತ್ತಿರುವ ತಮ್ಮ ತಂದೆಯ ಫೋಟೋ ಪೋಸ್ಟ್ ಮಾಡಿದ ಅಭ್ರನೀಲ್, “ಈ ಪ್ರೀತಿಗೆ ತಾಯಂದಿರ ದಿನ ಅಂತ ಯಾವುದೇ ಒಂದು ಪ್ರತ್ಯೇಕ ದಿನದ ಅಗತ್ಯವಿಲ್ಲ. ಆಕೆಯ ಕಡೆಯ ಜನ್ಮದಲ್ಲಿ ಪಥದಲ್ಲಿ ಸಾಗುವ ನಡಿಗೆಯ ಸಾಥಿಯಾಗಿ ನನ್ನ ತಂದೆ ಇರಲಿ. ಈ ಚಿತ್ರವನ್ನು ಟೈಮ್‌ಲೈನ್‌ನಲ್ಲಿ ಹಂಚಿಕೊಳ್ಳದೇ ಇರಲು ನನ್ನಿಂದ ಆಗಲಿಲ್ಲ” ಎಂದು ಕ್ಯಾಪ್ಷನ್ ಹಾಕಿದ್ದಾರೆ.
https://www.facebook.com/abhraneel.malakar/posts/10215803383157396