ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ಕೊಟ್ಟ ಬಳಿಕ ದೆಹಲಿಯ ನಿರಾಂಕಾರಿ ಸಮಾಗಮ ಮೈದಾನದಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಉತ್ತರ ದೆಹಲಿಯ ಬುರಾರಿಯಲ್ಲಿರುವ ಈ ಮೈದಾನದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿರುವ ರೈತರನ್ನು ಒಂದೆಡೆ ಸೇರಿಸಲಾಗಿದೆ. ಕೆಂಪು, ಹಸಿರು ಹಾಗೂ ನೀಲಿ ಬಾವುಟಗಳನ್ನು ಹೊತ್ತು ತಂದ ರೈತರು ಅನೇಕ ಘೋಷವಾಕ್ಯಗಳನ್ನು ಇದೇ ವೇಳೆ ಕೂಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಖಾಸಗೀ ಹೂಡಿಕೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಟ್ಟು ತರಲಾಗಿರುವ ನೂತನ ಕಾಯಿದೆಗಳನ್ನು ವಿರೋಧಿಸಿ ಅನೇಕ ಸಂಘಟನೆಗಳು ಪ್ರತಿಭಟನೆಯಲ್ಲಿ ನಿರತವಾಗಿವೆ.