alex Certify ವರ್ಷದ ಕೊನೆಯ ಸೂರ್ಯಗ್ರಹಣ ಕಣ್ತುಂಬಿಕೊಳ್ಳಲು ಇಲ್ಲಿ ಸಿಗುತ್ತಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದ ಕೊನೆಯ ಸೂರ್ಯಗ್ರಹಣ ಕಣ್ತುಂಬಿಕೊಳ್ಳಲು ಇಲ್ಲಿ ಸಿಗುತ್ತಿದೆ ಅವಕಾಶ

ವಿಶ್ವದ ಜನತೆ ಇಂದು 2020ರ ಕೊನೆಯ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ. ಆದರೆ ಈ ವಿಶೇಷ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗೋದಿಲ್ಲ. ಆದರೆ ಈ ಈ ಗ್ರಹಣದ ವಿದ್ಯಮಾನವನ್ನ ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆ 4ನಿಮಿಷಕ್ಕೆ ಭಾಗಶಃ ಗ್ರಹಣ ಆರಂಭವಾಗಲಿದೆ. ಪೂರ್ಣ ಪ್ರಮಾಣದ ಗ್ರಹಣ 8 ಗಂಟೆ 2 ನಿಮಿಷಕ್ಕೆ ಗೋಚರಿಸಲಿದೆ. ರಾತ್ರಿ 9:43ರ ಸುಮಾರಿಗೆ ಪೂರ್ಣ ಪ್ರಮಾಣಕ್ಕೆ ತಲುಪಿ ಮಧ್ಯರಾತ್ರಿ 12 ಗಂಟೆ 23 ನಿಮಿಷಕ್ಕೆ ಅಂತ್ಯಗೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ.

ಈ ವರ್ಷದ ಕೊನೆಯ ಗ್ರಹಣವು ಪೂರ್ಣ ಪ್ರಮಾಣದಲ್ಲಿ ದಕ್ಷಿಣ ಅಮೆರಿಕದ ಚಿಲಿ, ಅರ್ಜೆಂಟೀನಾದ ಟೆಮುಕೋ, ವಿಲರಿಕಾ, ಸಿಯೆರಾ ಕೊಲರಾಡೋ ನಗರಗಳಲ್ಲಿ , ಅಟ್ಲಾಂಟಿಕ್​ ಹಾಗೂ ಹಿಂದೂ ಮಹಾಸಾಗರದ ಕೆಲ ಭಾಗಗಳಲ್ಲಿ ಕಾಣಿಸಲಿದೆ.

ಇನ್ನು ಸೂರ್ಯಗ್ರಹಣವನ್ನ ಬರಿಗಣ್ಣಿನಿಂದ ನೋಡೋದ್ರಿಂದ ಅಪಾಯ ಇರೋದ್ರಿಂದ ಎಕ್ಲಿಪ್ಸ್ ಗ್ಲಾಸ್​ಗಳನ್ನ ಬಳಸುವಂತೆ ನಾಸಾ ಸಲಹೆ ನೀಡಿದೆ. ಅಮೆರಿಕನ್​ ಆಟೋಮೊಬೈಲ್​ ಅಸೋಸಿಯೇಷನ್​ ಪ್ರಕಾರ ಈ ವಿದ್ಯಮಾನದ ಸಮಯದಲ್ಲಿ ವಾಹನ ಚಲಾವಣೆ ಮಾಡೋದು ಕೂಡ ಅಪಾಯವಂತೆ. ಅನಿವಾರ್ಯ ಕಾರಣಕ್ಕೆ ಗ್ರಹಣ ಕಾಲದಲ್ಲಿ ವಾಹನ ಚಲಾವಣೆ ಮಾಡುವವರು ಹೆಡ್​ಲೈಟ್​ ಆನ್​ ಇಡಿ ಎಂದು ಸಲಹೆ ನೀಡಲಾಗಿದೆ.

ಭಾರತೀಯರಿಗೆ ಈ ವರ್ಷದ ಕೊನೆಯ ಗ್ರಹಣ ಕಣ್ತುಂಬಿಕೊಳ್ಳಲು ನಾಸಾ ಅವಕಾಶ ಕಲ್ಪಿಸಿದೆ. ನಾಸಾದ ಅಧಿಕೃತ ವೆಬ್​ಸೈಟ್​ ಹಾಗೂ ಟ್ವಿಟರ್​​ನಲ್ಲಿ ಗ್ರಹಣದ ನೇರ ಪ್ರಸಾರ ಇರಲಿದೆ. ಯುಟ್ಯೂಬ್​​ನಲ್ಲೂ ನಾಸಾ ಲೈವ್​​ ಸ್ಟ್ರೀಮಿಂಗ್​ ಮಾಡಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...