ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಎಷ್ಟು ಹೇಳಿದರೂ ಸಾಲುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.
ಐಎಫ್‌ಎಸ್ ಅಧಿಕಾರಿ ಸುಶಾಂತ ನಂದ ಅವರು ಶೇರ್ ಮಾಡಿರುವ ವಿಡಿಯೊ ಒಂದರಲ್ಲಿ, ಮಹಿಳೆಯೊಬ್ಬಳು ಪೆಂಗ್ವಿನ್ ನ್ನು ಸಮುದ್ರದ ತಟದಲ್ಲಿ ಬಿಟ್ಟು, ಸಮುದ್ರಕ್ಕೆ ಹೋಗುವುದಕ್ಕೆ ಸಹಾಯ ಮಾಡಿದ್ದಾರೆ. ಸಮುದ್ರದೊಳಗೆ ಹೋಗುವ ಮೊದಲು ಪೆಂಗ್ವಿನ್ ತನ್ನನ್ನು ಸುರಕ್ಷಿತವಾಗಿ ಸಮುದ್ರದೊಳಗೆ ಬಿಟ್ಟ ಮಹಿಳೆಯನ್ನು ನೋಡಿ, ಕೊಂಚ ಸಮಯ ನಿಂತು ಮುಂದೆ ಹೋಗಿದೆ.
ಈ ಘಟನೆ 2017ರಲ್ಲಿ ನಡೆದಿದ್ದರೂ ಇದೀಗ ಅದನ್ನು ನಂದ ಅವರು ಹಾಕಿದ್ದು, ಆ ವಿಡಿಯೊದಲ್ಲಿ ಮಹಿಳೆಯನ್ನು ಬಿಟ್ಟು ಹೋಗಲು ಪೆಂಗ್ವಿನ್‌ಗೆ ಇಷ್ಟವಿಲ್ಲದಿರುವಂತೆ ಕಾಣುತ್ತದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾವಿರಾರು ಕಾಮೆಂಟ್ ಹಾಗೂ ಲೈಕ್ಸ್‌ಗಳು ಬಂದಿವೆ. ಕೆಲವರು ಮಹಿಳೆ ಮತ್ತು ಪೆಂಗ್ವಿನ್ ನಡುವಿನ ಬಾಂಧವ್ಯದ ಬಗ್ಗೆ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಪೆಂಗ್ವಿನ್‌ಗೆ ಕೊನೆಗೂ ಮುಕ್ತಿ ಸಿಕ್ಕಿತು ಎಂದಿದ್ದಾರೆ.