
ಈ ರೀತಿಯ ಅಚ್ಚರಿಯ ಘಟನೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರೆ, ಇದು ಸಾಧ್ಯ ಎಂದು ಈ ವಿಡಿಯೊ ಸಾಬೀತು ಮಾಡಿದೆ. ಯತಿರಾಜನ್ ಶ್ರೀನಿವಾಸನ್ ಎನ್ನುವ ವ್ಯಕ್ತಿಯೊಬ್ಬರು, ನವಿಲಿಗೆ ಅಕ್ಕಿ ಕಾಳು ತಿನ್ನಿಸುತ್ತಿರುವ ವಿಡಿಯೊ ಟ್ವೀಟರ್‌ನಲ್ಲಿ ಶೇರ್ ಮಾಡಿದ್ದು, ಇದೀಗ ಈ ವಿಡಿಯೊ ವೈರಲ್ ಆಗಿದೆ.
5 ಅಡಿ ಉದ್ದದ ನವಿಲು ಗರಿ ಇದಕ್ಕಿದೆ ಎಂದು ಯತಿರಾಜನ್ ಟ್ವೀಟ್ ಮಾಡಿದ್ದು, 26 ಸೆಕೆಂಡ್‌ನ ವಿಡಿಯೊದಲ್ಲಿ ಅಕ್ಕಿಯ ಕಾಳನ್ನು ಜೋರಾಗಿ ತಿನ್ನುತ್ತಿದೆ. ಇದೀಗ ಈ ವಿಡಿಯೊ ವೈರಲ್ ಆಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಕೆಲವರು ಈ ವಿಡಿಯೊವನ್ನು ನೋಡಿ ಆನಂದಿಸಿದರೆ, ಇನ್ನು ಕೆಲವರು ನವಿಲಿನ ಕೊಕ್ಕಿನಿಂದ ಅಕ್ಕಿಯನ್ನು ಹೆಕ್ಕುವಾಗ ನಿಮ್ಮ ಕೈಗೆ ನೋವಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.