
ಈ ಬಾರಿ ಕ್ರಿಸ್ಮಸ್ ಅನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೋವಿಡ್-19 ಇರುವ ಕಾರಣದಿಂದಾಗಿ ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ.
ಹಬ್ಬದ ಪ್ರಯುಕ್ತ ತಮ್ಮ ಮಗಳು ಜೋಯಿಶ್ ಇರಾನಿ ತಯಾರಿಸಿದ್ದ ಟರ್ಕಿಯ ಖಾದ್ಯದ ಚಿತ್ರವೊಂದನ್ನು ಸ್ಮೃತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ನಿಮ್ಮ ಮಗಳು ರಾಕ್‌ಸ್ಟಾರ್ ಥರ ಅಡುಗೆ ಮಾಡಿದರೆ, ನಿಮಗೆ ಇದು ಸಿಗುತ್ತದೆ” ಎಂದು ಮಗಳ ಅಡುಗೆಯ ಚಿತ್ರಕ್ಕೆ ಕ್ಯಾಪ್ಷನ್ ಹಾಕಿದ್ದಾರೆ ಇರಾನಿ.

https://www.instagram.com/p/ByCBogcH5LH/?utm_source=ig_web_copy_link