ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್ವೊಂದನ್ನ ಶೇರ್ ಮಾಡಿದ್ದು ಈ ಪೋಸ್ಟ್ನಲ್ಲಿರುವ ಕವಿತೆ ನಿಮ್ಮ ಜೀವನದ ಹಳೆಯ ನೆನಪುಗಳನ್ನ ಹಸನು ಮಾಡುವಂತಿದೆ.
ಸ್ಮೃತಿ ಇರಾನಿ ಕವಯಿತ್ರಿ ಜಯಾ ಸರ್ಕಾರ್ ಎಂಬವರ ಮೇರಿ ಭಿ ಏಕ್ ಚೋಟಾ ಸಾ ಮೊಹಲ್ಲಾ ಥಾ ಎಂಬ ಪದ್ಯವನ್ನ ಶೇರ್ ಮಾಡಿದ್ದಾರೆ.
ಖುದ್ದು ಜಯ ಸರ್ಕಾರ್ ಅವರೇ ನಿರೂಪಿಸಿರುವ ಮೇರಾ ಭಿ ಏಕ್ ಛೋಟಾ ಸಾ ಮೊಹಲ್ಲಾ ಥಾ ಎಂಬ ಪದ್ಯವನ್ನ ಮೆಚ್ಚಿದ ಸ್ಮೃತಿ ಇರಾನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಸುಂದರ ಪದ್ಯವನ್ನ ಆನ್ಲೈನ್ನಲ್ಲಿ ಕಂಡುಕೊಂಡೆ. ನನಗೆ ಈ ಮಹಿಳೆ ಯಾರು ಅನ್ನೋದು ಗೊತ್ತಿಲ್ಲ. ಆದರೆ ಈಕೆಯ ಪದ್ಯದ ಸಾಲುಗಳಲ್ಲಿ ಬದುಕು ನಮ್ಮನ್ನ ಹೇಗೆಲ್ಲ ನಡೆಸಿದೆ ಅನ್ನೋದು ತಿಳಿಯುತ್ತೆ. ಅನೇಕರು ಬ್ಯಾಂಕ್ ಖಾತೆ, ಐಷಾರಾಮಿ ಕಾರುಗಳನ್ನೇ ತಮ್ಮ ಜೀವನ ಅಂದು ಕೊಳ್ತಾರೆ. ಆದರೆ ನನ್ನ ಪ್ರಕಾರ ಸುಂದರ ಜೀವನಕ್ಕೆ ಒಳ್ಳೆ ಸಂಬಂಧ ಹಾಗೂ ನೆನಪುಗಳು ಮುಖ್ಯ. ಅಂದ ಹಾಗೆ ನನ್ನದೂ ಒಂದು ಸಣ್ಣ ರಸ್ತೆ ಇದೆ. ಅಲ್ಲೊಂದು ಅಶ್ವತ್ಥ ಮರ ಇದೆ… ಅಂದ ಹಾಗೆ ನಿಮ್ಮದು…?
ನನ್ನ ಕಮೆಂಟ್ ಸೆಕ್ಷನ್ನಿಂದಾಗಿ ಈ ಮಹಿಳೆಯರ ಹೆಸರು ಜಯಾ ಸರ್ಕಾರ್ ಎಂದು ತಿಳಿಯಿತು ಎಂದು ಹೇಳ್ತಾ.. ಜಯಾ ಸರ್ಕಾರ್ನ ಟ್ಯಾಗ್ ಮಾಡಿದ್ದಾರೆ.
ಜಯಾ ಸರ್ಕಾರ್ ಕೂಡ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಧನ್ಯವಾದ ಅರ್ಪಿಸಿದ್ದಾರೆ. ಕವಿತೆಯಲ್ಲಿ ಜೀವನದ ವಾಸ್ತವತೆಯನ್ನ ಅರ್ಥಪೂರ್ಣವಾಗಿ ವಿವರಿಸಲಾಗಿದೆ .
https://www.instagram.com/tv/CJ2fVyYnRC8/?utm_source=ig_web_copy_link