ಎಳವೆಯಿಂದಲೇ ಶಿಕ್ಷಣದ ಸಂಸ್ಕಾರ ಪಡೆಯಲು ಮನೆಯೇ ಮೊದಲ ಪಾಠಶಾಲೆ ಆಗಬೇಕು. ಶಾಲೆಗೆ ಸೇರಿಸುವ ಮುನ್ನ ಕನಿಷ್ಠ ಜ್ಞಾನವನ್ನಾದರೂ ಮಕ್ಕಳಿಗೆ ತುಂಬಬೇಕು. ಆಗ ಮಾತ್ರ ಮುಂದಿನ ವಿದ್ಯೆ ತಲೆಗಿಳಿಯುತ್ತದೆ.
ಬಾಲ್ಯಾವಸ್ಥೆಯಿಂದಲೇ ಮನೆಯಲ್ಲಿ ಹೇಳಿಕೊಟ್ಟ ವಿದ್ಯೆ ಕೊನೆಯ ದಿನಗಳವರೆಗೆ ರೂಢಿಸಿಕೊಂಡರೆ ಹಾಗೇ ಉಳಿಯುತ್ತದೆ. ಅಂತಹುದೇ ಒಂದು ಪ್ರಯತ್ನ ಈ ವೀಡಿಯೋದಲ್ಲಿದೆ.
ಈಗಿನ ಕಾಲದಲ್ಲಿ ಮಕ್ಕಳು ದೊಡ್ಡವರ ಮಾತೇ ಕೇಳುವುದಿಲ್ಲ ಅನ್ನುವ ಸಾಮಾನ್ಯ ದೂರಿದೆ. ಆದರೆ, ಈ ವಿಡಿಯೋದಲ್ಲಿ ಹಾಗಲ್ಲ.
ಹಾರ್ಮೋನಿಯಂ ಪೆಟ್ಟಿಗೆ ಮುಂದೆ ಕುಳಿತು, ದೊಡ್ಡವರು ಹೇಳಿಕೊಟ್ಟಿದ್ದನ್ನು ಅನುಕರಣೆ ಮಾಡುವ ಉತ್ಸಾಹ ತೋರುತ್ತಿದೆ ಪುಟ್ಟ ಮಗು. ಸಂಗೀತಾಭ್ಯಾಸದ ಕಠಿಣ ಸಾಧನೆಗೆ ಈಗಿನಿಂದಲೇ ಮಗುವನ್ನು ತಯಾರು ಮಾಡುತ್ತಿರುವಂತಿದೆ.
ಪುಟ್ಟ ಪೋರ ಕೂಡ ಸಂಗೀತದ ಸಂಸ್ಕಾರವನ್ನು ತನ್ನೊಳಗೆ ಇಳಿಸಿಕೊಳ್ಳುತ್ತಾ, ಸ್ವರ, ರಾಗ, ತಾಳ, ಲಯಗಳ ಹದವರಿತು ಸಂಗೀತ ಜ್ಞಾನವನ್ನು ಪಡೆಯುತ್ತಿದ್ದಾನೆ.
ಆತನ ಬಾಯಲ್ಲಿ ಉಲಿಯುವ ತೊದಲು ರಾಗಗಳನ್ನು ಕೇಳುವುದೇ ಕಿವಿಗೆ ಇಂಪು, ನೋಡುವುದೇ ಕಣ್ಣಿಗೆ ಆನಂದ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಕಂಡ ಅನೇಕರು, ನಮ್ಮನೆ ಮಕ್ಕಳೂ ಹೀಗೇ ಆದರೆ ಎಷ್ಟು ಚೆಂದ ಎಂದುಕೊಳ್ಳದೇ ಇರಲಾಗದು.
https://youtu.be/Zswxq38ISKI
https://www.facebook.com/105839257809019/posts/213360930390184/?sfnsn=wiwspwa