alex Certify ಪಶ್ಚಿಮ ಬಂಗಾಳದಲ್ಲೂ ಮೋದಿ ವರ್ಚಸ್ಸಿದೆ ಅಂದ್ರಾ ಪ್ರಶಾಂತ್ ಕಿಶೋರ್…? ವೈರಲ್ ಆಗಿದೆ ಆಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಶ್ಚಿಮ ಬಂಗಾಳದಲ್ಲೂ ಮೋದಿ ವರ್ಚಸ್ಸಿದೆ ಅಂದ್ರಾ ಪ್ರಶಾಂತ್ ಕಿಶೋರ್…? ವೈರಲ್ ಆಗಿದೆ ಆಡಿಯೋ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದೆ. ಈ ನಡುವೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ರ ಆಡಿಯೋ ಕ್ಲಿಪ್​ ಒಂದನ್ನ ಬಿಜೆಪಿಗರು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾರೆ. ಕ್ಲಬ್​ ಹೌಸ್​ ಚಾಟ್​​ನಲ್ಲಿ ಸ್ವತಃ ಪ್ರಶಾಂತ್​ ಕಿಶೋರ್​​ ಬಂಗಾಳದಲ್ಲಿ ಮಮತಾರಷ್ಟೇ ಪ್ರಧಾನಿ ಮೋದಿ ಕೂಡ ಪ್ರಖ್ಯಾತಿ ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಆಡಿಯೋ ಕ್ಲಿಪ್​ನ್ನು ಬಿಜೆಪಿ ಅಮಿತ್​ ಮಾಲ್ವಿಯಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಪತ್ರಕರ್ತರೊಂದಿಗೆ ಪ್ರಶಾಂತ್​ ಕಿಶೋರ್​ ನಡೆಸಿದ ಚಾಟ್​​ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧದ ಆಕ್ರೋಶ, ರಾಜಕೀಯ ಧೃವೀಕರಣ ಹಾಗೂ ದಲಿತ ಮತಗಳು ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವ ಮೂರು ಅಂಶಗಳಾಗಿವೆ ಎಂದು ಹೇಳಿದ್ದಾರೆ.

ಟಿಎಂಸಿ ಪಕ್ಷವನ್ನ ಈಗಷ್ಟೇ ಚುನಾವಣೆಯಿಂದ ಹೊರಗೆಸೆಯಲಾಗಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ನಿರ್ವಾಹಕ ಅಮಿತ್​ ಮಾಲ್ವಿಯಾ ಟ್ವೀಟಾಯಿಸಿದ್ದಾರೆ.

ಇನ್ನು ಈ ಆಡಿಯೋ ಕ್ಲಿಪ್ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದಂತೆಯೇ ಪ್ರಶಾಂತ್​ ಕಿಶೋರ್​ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದು. ಬಿಜೆಪಿಗರು ನನ್ನ ಮಾತುಗಳನ್ನ ಅವರ ನಾಯಕರ ಮಾತುಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಕೇವಲ ಆಯ್ದ ಭಾಗಗಳನ್ನ ವಿಕೃತವಾಗಿ ಬಳಕೆ ಮಾಡೋದ್ರ ಬದಲು ಪೂರ್ಣ ಸಂಭಾಷಣೆಯನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆಯ್ದ ಭಾಗಗಳನ್ನ ವೈರಲ್​ ಮಾಡುವ ನೀವು ಕ್ಲಬ್​ ಹೌಸ್​ ಜೊತೆಗಿನ ಪೂರ್ಣ ಸಂಭಾಷಣೆಯನ್ನೂ ಹಂಚಿಕೊಳ್ಳುವ ಧೈರ್ಯ ತೋರಿ ಎಂದು ಹೇಳಿದ್ದಾರೆ.

ಮಾಲ್ವಿಯಾ ಶೇರ್​ ಮಾಡಿರುವ ಆಡಿಯೋ ತುಣುಕಿನಲ್ಲಿ, ಬಿಜೆಪಿಗೆ ಮೋದಿ ಹಾಗೂ ಹಿಂದೂ ಹೆಸರಿನಲ್ಲಿ ಮತಗಳು ಬೀಳುತ್ತವೆ. ರಾಜಕೀಯ ಧೃವೀಕರಣ, ದಲಿತ ಜನಾಂಗ, ಹಿಂದಿ ಮಾತನಾಡುವವರು ಇವೆಲ್ಲ ಬಿಜೆಪಿ ಗೆ ಲಾಭ ತರುವ ಅಂಶಗಳು. ಮೋದಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತರಾಗಿದ್ದಾರೆ. ಇಲ್ಲಿ ಹಿಂದಿ ಮಾತನಾಡುವ ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ದಲಿತರು 27 ಪ್ರತಿಶತ ಇದ್ದು ಅವರು ಸಂಪೂರ್ಣ ಬಿಜೆಪಿ ಪರ ನಿಲ್ತಾರೆ. ಧೃವೀಕರಣ ಖಂಡಿತವಾಗಿಯೂ ಇರುತ್ತದೆ ಎಂದು ಕಿಶೋರ್​ ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...