ಆಘಾತಕಾರಿ ವಿಡಿಯೋ ಒಂದರಲ್ಲಿ ಪ್ರಾಂಶುಪಾಲನೊಬ್ಬ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ್ದು ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂಥದೊಂದು ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಸೋವ್ಹಾನ್ ಪ್ರಾಂತ್ಯದ ಪಿಪ್ರಕಾಲಾ ಪ್ರದೇಶದಲ್ಲಿ ನಡೆದಿದೆ.
ವಿಡಿಯೋದಲ್ಲಿ ಕಂಡು ಬರುವಂತೆ ಶಾಲಾ ಪ್ರಾಂಶುಪಾಲ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಟಾಯ್ಲೆಟ್ ಕ್ಲೀನ್ ಮಾಡುವಂತೆ ತಾಕೀತು ಮಾಡಿದ್ದು, ಸ್ವಚ್ಛವಾಗದಿದ್ದರೆ ಬೀಗ ಹಾಕುವುದಾಗಿ ಹೇಳಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತನಿಖೆಗೆ ಮುಂದಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಪ್ಪಿತಸ್ಥ ಪ್ರಾಂಶುಪಾಲನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
https://twitter.com/AhmedKhabeer_/status/1567739265630752768?ref_src=twsrc%5Etfw%7Ctwcamp%5Etweetembed%7Ctwterm%5E1567739265630752768%7Ctwgr%5Ebfbb9089e2cf4c05112f84e6604d5455f8ea4bcf%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-shocking-primary-school-students-made-to-clean-toilet-by-principal-ups-ballia-watch-5621588%2F