ದೆಹಲಿಯ ಸಹಕಾರ ಸಂಘದಲ್ಲಿ ಗುಮಾಸ್ತನಾಗಿದ್ದ ವ್ಯಕ್ತಿಯೊಬ್ಬ ತನ್ನಿಬ್ಬರು ಹಸುಳೆಗಳನ್ನು ಬೀದಿಯಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ.
ಕಳೆದ ಮೂರು ತಿಂಗಳಿಂದ ವೇತನ ಬಾರದೇ ಇರುವುದರಿಂದ ಸಂಸಾರ ತೂಗಿಸಲು ಹರಸಾಹಪಟ್ಟ ವ್ಯಕ್ತಿ, ದಿಕ್ಕು ತೋಚದೆ ಎಳೆಕಂದಮ್ಮಗಳನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ.
ರಸ್ತೆಯಲ್ಲಿ ತೆವಳುತ್ತಿದ್ದ ಹಸುಳೆಗಳ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕುಟುಂಬಸ್ಥರನ್ನು ಹುಡುಕಿ ಮಕ್ಕಳನ್ನು ತಲುಪಿಸಿದ್ದಾರೆ.