ಮನಿ ಲ್ಯಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ನಿವಾಸ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭದ್ರತಾ ಸೇವೆಗಳ ಕಂಪನಿ ನಡೆಸುತ್ತಿರುವ ಶಾಸಕ ಪ್ರತಾಪ್ ಸರ್ನಾಯಕ್ ಒಡೆತನದ ಥಾನೆ ಹಾಗೂ ಮುಂಬೈನ 10 ಸ್ಥಳಗಳಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಇಡಿ ನಿರ್ದೇಶಕ ಹೇಳಿದ್ದಾರೆ.
ಶಿವಸೇನೆ ನಾಯಕರಿಗೆ ತೊಂದರೆ ಕೊಡಬೇಕು ಎಂದೇ ಕೇಂದ್ರ ಸರ್ಕಾರ ತನ್ನ ಅಧೀನ ಏಜೆನ್ಸಿಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಆದರೆ ಈ ರೀತಿಯ ಘಟನೆಗಳಿಂದ ನಮ್ಮ ನಾಯಕರು ಇನ್ನಷ್ಟು ಬಲಶಾಲಿಯಾಗುತ್ತಾರೆ ಅಂತಾ ಸೇನಾ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಗುಡುಗಿದ್ದಾರೆ.