ಮುಂಬೈ: ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಂತ್ರಿಮಂಡಲದ ಓರ್ವ ಸಚಿವರ ತಲೆದಂಡವಾಗಿದೆ.
ಖ್ಯಾತ ಟಿಕ್ ಟಾಕ್ ಸ್ಟಾರ್ ಪೂಜಾ ಚವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಅರಣ್ಯ ಸಚಿವ ಸಂಜಯ್ ರಾಥೋಡ್ ಹೆಸರು ಕೇಳಿಬಂದಿತ್ತು. ವಿಪಕ್ಷ ಬಿಜೆಪಿ ನಾಯಕರು ಸಂಜಯ್ ರಾಥೋಡ್ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ರಾಥೋಡ್ ಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಇದೀಗ ಸಿಎಂ ಭೇಟಿಯಾದ ಬೆನ್ನಲ್ಲೇ ಸಂಜಯ್ ರಾಥೋಡ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
5 ತಿಂಗಳ ಹಿಂದೆ ನಡೆದಿದ್ದ ಬಾಲಕನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಟಿಕ್ ಟಾಕ್ ಸ್ಟಾರ್ ಪೂಜಾ, ಪುಣೆಯ ತಮ್ಮ ಮನೆಯ ಬಾಲ್ಕನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಪೂಜಾ ಆತ್ಮಹತ್ಯೆ ಬೆನ್ನಲ್ಲೇ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್, ಡಿಜಿಪಿ ಹೇಮಂತ್ ನಗ್ರಾಲೆಗೆ ಪತ್ರ ಬರೆದು ಸಚಿವ ಸಂಜಯ್ ರಾಥೋಡ್ ವಿರುದ್ಧ 12 ಆಡಿಯೋ ಕ್ಲಿಪ್ ಗಳನ್ನು ಸಲ್ಲಿಸಿದ್ದರು. ಪೂಜಾ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಥೋಡ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.