335 ವರ್ಷ ಹಳೆಯ ನ್ಯೂಟನ್ ಮೂರನೇ ನಿಯಮ ಪರಿಪೂರ್ಣವಾಗಿಲ್ಲ ಅಂತಾ ಶಿಮ್ಲಾ ಮೂಲದ ವಿಜ್ಞಾನಿ ಅಜಯ್ ಶರ್ಮಾ ಹೇಳಿದ್ದಾರೆ.
ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆಯೇ ಇರಬೇಕು ಎಂದೇನಿಲ್ಲ. ಅದಕ್ಕಿಂತ ಹೆಚ್ಚು, ಕಡಿಮೆ, ಇಲ್ಲವೇ ಸಮನಾದ ಪ್ರತಿಕ್ರಿಯೆ ಇರಬಹುದು ಅಂತಾ ಹೇಳಿದ್ದಾರೆ.
ತಮ್ಮ ಈ ವಾದವನ್ನ ಮಂಡಿಸಲು ಸರ್ಕಾರದ ಬಳಿ ಅಜಯ್ ಶರ್ಮಾ ಸಹಾಯ ಕೇಳಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿರುವ ಅಜಯ್ ಶರ್ಮಾ, ನ್ಯೂಟನ್ ಮೂರನೇ ನಿಯಮವನ್ನ ಸರಿಪಡಿಸಲು ನನಗೆ 10 ಲಕ್ಷ ರೂಪಾಯಿ ಅನುದಾನ ನೀಡಬೇಕು ಅಂತಾ ಕೋರಿದ್ದಾರೆ.
ನ್ಯೂಟನ್ ಮೂರನೇ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಇದ್ದೇ ಇರುತ್ತೆ ಎಂದು ಹೇಳಿದೆ. ಆದರೆ ಇದು ತಪ್ಪು ಎನ್ನುತ್ತಿರುವ ಅಜಯ್ ಶರ್ಮಾ, ನ್ಯೂಟನ್ ಈ ನಿಯಮ ರೂಪಿಸುವ ವೇಳೆಯಲ್ಲಿ ವಸ್ತುವಿನ ಆಕಾರ, ಗಾತ್ರವನ್ನ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರೆಯೆಯೇ ಇರಬೇಕು ಎಂದೇನಿಲ್ಲ. ಕಡಿಮೆ ಇಲ್ಲ ಅಧಿಕ ಪ್ರತಿಕ್ರಿಯೆ ಕೂಡ ಇರಬಹುದು ಎಂದಿದ್ದಾರೆ.