ಕೊರೊನಾ ಬಂದವರೆಲ್ಲ ಸಾಯುತ್ತಾರೆಂಬ ಭಯವಿದೆ. ಜೊತೆಗೆ ಆಕ್ಸಿಜನ್ ಮಟ್ಟ ಕಡಿಮೆಯಾಗ್ತಿದ್ದಂತೆ ಅವ್ರ ಬದುಕಿನ ಭರವಸೆ ಬಿಡಲಾಗುತ್ತದೆ. ಆದ್ರೆ ಮಾನಸಿಕವಾಗಿ ಸದೃಢವಾಗಿದ್ದು, ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಕೊರೊನಾ ಗೆಲ್ಲುವುದು ಕಷ್ಟವಲ್ಲ. ಇದಕ್ಕೆ ಶಿಮ್ಲಾದ ವ್ಯಕ್ತಿ ಉತ್ತಮ ನಿದರ್ಶನ.
ಶಿಮ್ಲಾ ನಗರದ ಆಹಾರ ಸುರಕ್ಷತಾ ಅಧಿಕಾರಿ ಅಶೋಕ್ ಮಂಗ್ಲಾಗೆ ಕೊರೊನಾ ಬಂದಿತ್ತು. ಕೊರೊನಾ ಪಾಸಿಟಿವ್ ಆದ ನಂತರ ಅವರ ಆಮ್ಲಜನಕದ ಮಟ್ಟ 23 ಕ್ಕೆ ಇಳಿದಿತ್ತು. ಚಿಕಿತ್ಸೆಗಾಗಿ ಅವರನ್ನು 27 ದಿನಗಳ ಕಾಲ ವೆಂಟಿಲೇಟರ್‌ನಲ್ಲಿಟ್ಟಿದ್ದರು. ಈ ಸಮಯದಲ್ಲಿ ಅವರು 30 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಆದ್ರೆ ಕೊರೊನಾ ಯುದ್ಧದಲ್ಲಿ ಗೆದ್ದು ಬಂದಿದ್ದಾರೆ.
ಸೆಪ್ಟೆಂಬರ್ 3ರಂದು ಅವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು. ಸೆಪ್ಟೆಂಬರ್ 12ರಂದು ವೆಂಟಿಲೇಟರ್ ಗೆ ಹಾಕಲಾಗಿತ್ತು. ಅಕ್ಟೋಬರ್ 2ರ ನಂತ್ರ ಆರೋಗ್ಯದಲ್ಲಿ ಸುಧಾರಣೆ ಕಾಣಲು ಶುರುವಾಗಿತ್ತು. ಮನೆಗೆ ಬಂದ ನಂತ್ರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿತ್ತಂತೆ. ಮತ್ತೆ ವೆಂಟಿಲೇಟರ್ ನಲ್ಲಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತಂತೆ. ಮತ್ತೆ 7 ದಿನ ವೆಂಟಿಲೇಟರ್ ನಲ್ಲಿದ್ದ ಅಶೋಕ್ ಆರೋಗ್ಯ ನಂತ್ರ ಸುಧಾರಿಸಿದೆ. ವೈದ್ಯರ ತಂಡದಿಂದ ಉತ್ತಮ ಚಿಕಿತ್ಸೆ ದೊರೆತ ಕಾರಣ ನಾನು ಮರುಜೀವ ಪಡೆದಿದ್ದೇನೆಂದು ಅಶೋಕ್ ಹೇಳಿದ್ದಾರೆ.