alex Certify ದೇಶ ಕಂಡ ಅತ್ಯುತ್ತಮ ಮಹಿಳಾ ರಾಜಕಾರಣಿಯನ್ನು ನೆನೆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶ ಕಂಡ ಅತ್ಯುತ್ತಮ ಮಹಿಳಾ ರಾಜಕಾರಣಿಯನ್ನು ನೆನೆದ ನೆಟ್ಟಿಗರು

ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮೃತಪಟ್ಟು ಗುರುವಾರಕ್ಕೆ ಒಂದು ವರ್ಷವಾಗಿದೆ. ಒಂದು ವರ್ಷದ ಸ್ಮರಣಾರ್ಥ ಸುಷ್ಮಾ ಸ್ವರಾಜ್ ಅವರನ್ನು ನೆಟ್ಟಿಗರು ನೆನೆದು ಟ್ವೀಟ್ ಮಾಡಿದ್ದಾರೆ.

ಸುಷ್ಮಾ ಸ್ವರಾಜ್ ಅವರನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಬಿಜೆಪಿಯ ಬಹುತೇಕ ನಾಯಕರು ಸೇರಿದಂತೆ ಪಕ್ಷಾತೀತವಾಗಿ ಟ್ವೀಟ್ ಮೂಲಕ ಸ್ಮರಿಸಿಕೊಂಡಿದ್ದಾರೆ.

ಇನ್ನು ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್ ಅವರು ನನ್ನ ಕ್ಯಾಬಿನೆಟ್ ನ ಅತ್ಯುತ್ತಮ ಸಚಿವೆಯಾಗಿದ್ದರು ಎಂದು ಬಣ್ಣಿಸಿದ್ದಾರೆ. ಮೋದಿ ಮಾತ್ರವಲ್ಲದೇ ಅನೇಕ ಸಾರ್ವಜನಿಕರು ಸಹ ಸ್ವರಾಜ್ ಅವರನ್ನು ನೆನಪು ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ಆದ್ದರಿಂದ ಗುರುವಾರ ಇಡೀ ದಿನ ಸುಷ್ಮಾ ಸ್ವರಾಜ್ ಅವರ ಹೆಸರಿನ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಕಳೆದ ವರ್ಷ ಆಗಸ್ಟ್ 6 ರಂದು ತೀವ್ರ ಹೃದಯಾಘಾತದಿಂದ ಸುಷ್ಮಾ ಸ್ವರಾಜ್ ಮೃತಪಟ್ಟಿದ್ದರು.

https://twitter.com/aspirant_sanvi/status/1291262343649755137?ref_src=twsrc%5Etfw%7Ctwcamp%5Etweetembed%7Ctwterm%5E1291262343649755137%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fshe-left-an-indelible-mark-on-indian-politics-netizens-remember-sushma-swaraj-on-her-1st-death-anniversary%2F632766

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...