ಕಾಂಗ್ರೆಸ್ ಸಂಸದ ಹಾಗೂ ಜನಪ್ರಿಯ ಬರಹಗಾರ ಶಶಿ ತರೂರ್ ಇಂಗ್ಲಿಷ್ ಭಾಷೆಯ ಮೇಲಿನ ತಮ್ಮ ಪಾಂಡಿತ್ಯದಿಂದ ಎಲ್ಲೆಡೆ ಪ್ರಸಿದ್ಧಿ ಪಡೆದಿದ್ದಾರೆ. ಬಹಳಷ್ಟು ಬಾರಿ ಶಶಿ ತರೂರ್‌ರ ಟ್ವೀಟ್‌ಗಳಲ್ಲಿ ಇಂಗ್ಲಿಷ್ ಶಬ್ದಕೋಶದಲ್ಲಿ ಅಡಗಿಕೊಂಡಿರುವ ಪದಗಳು ಕಂಡುಬಂದು, ಅವುಗಳ ಅರ್ಥ ಹುಡುಕಲು ಡಿಕ್ಷನರಿ ನೋಡಬೇಕಾಗುತ್ತದೆ.
ತೆಲಂಗಾಣ ಪುರಸಭೆ ಆಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮ ರಾವ್ ಜೊತೆಗೆ ಟ್ವಿಟರ್‌ನಲ್ಲಿ ಸಂವಾದ ನಡೆಸುತ್ತಿದ್ದ ಶಶಿ ತರೂರ್, ಹೊಸ ಪದವನ್ನು ಪ್ರಯೋಗ ಮಾಡಿದ್ದು, ಅದರ ಅರ್ಥವೇನು ಹಾಗೂ ಉಚ್ಛಾರಣೆ ಹೇಗೆಂದು ನೆಟ್ಟಿಗರ ವಲಯದಲ್ಲಿ ಚರ್ಚೆ ಆಗುವಂತೆ ಮಾಡಿದೆ.
ತೆರಿಗೆ ಪಾವತಿದಾರರಿಗೆ ರಿಲೀಫ್: ಹೂಡಿಕೆದಾರರಿಗೆ ಶುಭಸುದ್ದಿ, ಎಫ್‌ಡಿ TDS ಕಡಿತ ತಪ್ಪಿಸಲು ಇಲ್ಲಿದೆ ಸುಲಭ ದಾರಿ
ಕೊರೋನಾಗೆ ಕಂಡು ಹಿಡಿಯುತ್ತಿರುವ ಮದ್ದುಗಳಿಗೆ ಇಡುತ್ತಿರುವ ಹೆಸರುಗಳ ಹಿಂದೆ ಶಶಿ ತರೂರ್ ಅವರ ಪಾತ್ರ ಖಂಡಿತಾ ಇದೆ ಅನಿಸುತ್ತದೆ ಎಂದು ಕೆ.ಟಿ ರಾಮರಾವ್ ಹೇಳಿಕೊಂಡು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಶಶಿ ತರೂರ್ ಏನೆಂದರು ಎಂಬುದು ತಿಳಿಯುವ ಬದಲಿಗೆ, ಆ ಟ್ಛೀಟ್‌ನಲ್ಲಿ ಬಳಸಿದ 29 ಅಕ್ಷರದ ‘floccinaucinihilipilification’ ಎಂಬ ಪದ ಎಲ್ಲೆಡೆ ಚರ್ಚೆಗೆ ಒಳಪಟ್ಟಿದೆ. ಇಂಗ್ಲಿಷ್ ಡಿಕ್ಷನರಿಯಲ್ಲಿ ಕಂಡು ಬರುವ ತಾಂತ್ರಿಕೇತರ ಪದಗಳಲ್ಲೇ ಅತ್ಯಂತ ಉದ್ದವಾದ ಪದವಿದು ಎನ್ನಲಾಗಿದೆ.