ತಮ್ಮ ಅಸಾಮಾನ್ಯ ಜ್ಞಾನ ಹಾಗೂ ಭಾಷಾ ಹಿಡಿತದಿಂದ ದೇಶವಾಸಿಗಳಲ್ಲಿ ’ಅಬ್ಬಬ್ಬಾ’ ಎನಿಸುವ ಮಟ್ಟದ ಚಾರ್ಮ್ ಹೊಂದಿರುವ ತಿರುವನಂತಪುರಂ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿದ್ಯಾರಂಭ ಶಾಸ್ತ್ರವೊಂದರಲ್ಲಿ ಭಾಗಿಯಾಗಿ, ಪುಟಾಣಿ ಮಕ್ಕಳನ್ನು ಅಕ್ಷರದ ಜಗತ್ತಿಗೆ ಪರಿಚಯಿಸಿದ್ದಾರೆ.
ಅಕ್ಕಿಯ ತಟ್ಟೆಯೊಂದರಲ್ಲಿ ಮಕ್ಕಳು ತಮ್ಮ ಮೊದಲ ಅಕ್ಷರ ಬರೆಯುವ ಈ ಶಾಸ್ತ್ರವನ್ನು 2-5 ವರ್ಷದ ಮಕ್ಕಳಿಗೆ ವಿದ್ವಾಂಸರು, ಬರಹಗಾರರು, ಶಿಕ್ಷಕರು ಹಾಗೂ ಅರ್ಚಕರು ಮೊದಲ ಅಕ್ಷರ ಬರೆಯಲು ನೆರವಾಗುತ್ತಾರೆ.
ಖಿನ್ನತೆ ದೂರ ಮಾಡಲು ಸೀವಿಸಿ ಈ ಆಹಾರ
ವಿದ್ಯಾರಂಭದ ಶಾಸ್ತ್ರದಲ್ಲಿ ತಾವು ಭಾಗಿಯಾದ ಚಿತ್ರವನ್ನು ಶಶಿ ತರೂರ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಕತ್ತಲೆಯ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ಅನುವಾಗುವ ಕಲಿಕೆಯನ್ನು ಸನ್ಮಾನಿಸುವ ಮೂಲಕ ಸರಿಯಾದ ಸ್ಪೂರ್ತಿಯಲ್ಲಿ ವಿಜಯದಶಮಿ ಆರಂಭಿಸಿದ್ದೇನೆ. ಬರಹದ ಜಗತ್ತಿಗೆ ಪರಿಚಿತಗೊಳ್ಳಲು ಒಂದಷ್ಟು ಮಕ್ಕಳನ್ನು ಮನೆಗೆ ಕರೆತರಲಾಗಿತ್ತು. ತ್ರಿವೇಂಡ್ರಮ್‌ನಲ್ಲಿ ನಾನು ಪ್ರತಿ ವರ್ಷ ಮಾಡುವಂತೆ, ಅವರ ಪುಟಾಣಿ ಬೆರಳುಗಳಲ್ಲಿ ಮೂರು ಲಿಪಿಗಳಲ್ಲಿ ’ಓಂ ಶ್ರೀ’ ಎಂದು ಬರೆಸಿದ್ದೇನೆ,” ಎಂದ ಶಶಿ ಮಕ್ಕಳೊಂದಿಗೆ ಸಂಪ್ರದಾಯದಲ್ಲಿ ಭಾಗಿಯಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.