ಪಣಜಿ: ಗೋವಾ ಉಪಮುಖ್ಯಮಂತ್ರಿ ಚಂದ್ರಕಾಂತ ಕಾವಳೇಕರ್ ಅಶ್ಲೀಲ ವೀಡಿಯೋ ಸೆಂಡ್ ಮಾಡಿದ ಆರೋಪ ಕೇಳಿಬಂದಿದೆ. ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವರು ಅಶ್ಲೀಲ ವೀಡಿಯೋ ಕಳುಹಿಸಿದ್ದಾರೆ.
ವಿಲೇಜಸ್ ಆಫ್ ಗೋವಾ ಎಂಬ ವಾಟ್ಸಾಪ್ ಗ್ರೂಪ್ ಗೆ ಚಂದ್ರಕಾಂತ ಕಾವಳೇಕರ್ ಅಶ್ಲೀಲ ವೀಡಿಯೋ ಹರಿಬಿಟ್ಟಿದ್ದಾರೆ. ಈ ಗ್ರೂಪ್ನಲ್ಲಿ ಸರ್ಕಾರಿ ಅಧಿಕಾರಿಗಳು, ಮಹಿಳೆಯರು, ಹೋರಾಟಗಾರರು ಸೇರಿದಂತೆ ಅನೇಕರು ಇದ್ದಾರೆ.
ಗೋವಾ ಫಾರ್ವರ್ಡ್ ಪಾರ್ಟಿ ಮಹಿಳಾ ಘಟಕ ಅಶ್ಲೀಲ ವಿಡಿಯೋ ಹರಿಬಿಟ್ಟ ಡಿಸಿಎಂ ವಿರುದ್ಧ ದೂರು ನೀಡಿದ್ದು, ಪ್ರಕರಣ ಕೂಡ ದಾಖಲಾಗಿದೆ. ಮಾತ್ರವಲ್ಲ, ಭಾರೀ ಆಕ್ರೋಶ, ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಚಂದ್ರಕಾಂತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.