ಪುಣೆ: ಅನ್ಲಾಕ್ 4 ಜಾರಿಯಾಗುತ್ತಿದ್ದಂತೆ ದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಅನೇಕ ಚಟುವಟಿಕೆಗಳು ಪುನಾರಂಭಗೊಳ್ಳುತ್ತಿವೆ. 5 ತಿಂಗಳ ನಂತರ ಮೆಟ್ರೋ ಸಂಚಾರ ಆರಂಭವಾಗಿದೆ. ಶಾಪಿಂಗ್ ಮಾಲ್ ಸೇರಿದಂತೆ ಹಲವು ಸೇವೆಗಳು ಅನ್ಲಾಕ್ 4ರಲ್ಲಿ ಪುನಾರಂಭಗೊಂಡಿದ್ದು, ಪುಣೆಯ ಬುಧವಾರ್ ಪೇಟೆಯಲ್ಲಿರುವ ವೇಶ್ಯಾಗೃಹಗಳು ಕೂಡ ಕಾರ್ಯಾಚರಣೆ ಆರಂಭಿಸಿವೆ.
ಬುಧವಾರ್ ಪೇಟೆಗೆ ಪ್ರವೇಶಿಸುವ ಗ್ರಾಹಕರಿಗೆ ಮಾಸ್ಕ್, ಸ್ಯಾನಿಟೈಸರ್, ಕಾಂಡೋಮ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಸೆಕ್ಸ್ ವರ್ಕರ್ ಗಳಿಗೆ ಹ್ಯಾಂಡ್ ಸ್ಯಾನಿಟೈಜರ್ ಮತ್ತು ಸೋಂಕು ನಿವಾರಕಗಳನ್ನು ನೀಡಲಾಗಿದ್ದು, ಕೆಮ್ಮು ಅಥವಾ ಜ್ವರದಿಂದ ಬಳಲುತ್ತಿರುವ ಗ್ರಾಹಕರನ್ನು ರಂಜಿಸದಂತೆ ಲೈಂಗಿಕ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ.
ವೇಶ್ಯಾಗೃಹಗಳ ಹೊರಗೆ ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲು ತಿಳಿಸಲಾಗಿದೆ. ಸುಮಾರು 3000ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರ ನೆಲೆಯಾಗಿರುವ ಈ ಪ್ರದೇಶವನ್ನು ನಿರ್ಬಂಧಿತ ವಲಯವೆಂದು ಘೋಷಿಸಿದ್ದು ಈಗ ಮಾರ್ಗಸೂಚಿಗಳೊಂದಿಗೆ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಅನ್ಲಾಕ್ ಒಂದರ ನಂತರದಲ್ಲಿ ಚಟುವಟಿಕೆ ಆರಂಭವಾಗಿದ್ದರೂ ಅನ್ಲಾಕ್ 4 ಜಾರಿಯಾದ ನಂತರ ಅಧಿಕೃತವಾಗಿ ಪುಣೆಯ ಬುಧವಾರ್ ಪೇಟೆಯಲ್ಲಿರುವ ವೇಶ್ಯಾಗೃಹಗಳು ಪುನಾರಂಭಗೊಂಡಿದೆ ಎಂದು ಹೇಳಲಾಗಿದೆ.