ಉತ್ತರಪ್ರದೇಶದ ಆಗ್ರಾ ನಗರದ ಸಿಕಂದ್ರ ಪ್ರದೇಶದಲ್ಲಿ ಫಾರ್ಮ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಫಾರ್ಮ್ ಹೌಸ್ ನಲ್ಲಿ ಹೊರಗಿನಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಎಎಸ್ಪಿ ಸೌರಭ್ ದೀಕ್ಷಿತ್ ನೇತೃತ್ವದ ಪೊಲೀಸರ ತಂಡ ದಿಢೀರ್ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಯುವತಿಯರು ಸೇರಿ 12 ಮಂದಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದಿಂದ ಯುವತಿಯರನ್ನು ಕರೆಸಿ ಗಿರಾಕಿಗಳನ್ನು ಸೆಳೆದು ದಂಧೆ ನಡೆಸಲಾಗುತ್ತಿತ್ತು.
ಫಾರ್ಮ್ ಹೌಸ್ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.