ನವದೆಹಲಿ: ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್ -19 ನಿರೋಧಕ ಆಕ್ಸ್‌ಫರ್ಡ್ ಎಕ್ಸಸ್ಟ್ರಾಜೆನೆಕಾ ಎಂಬ ಲಸಿಕೆ ಸಿದ್ಧ ಮಾಡಿದೆ. ಮೊದಲು ಭಾರತಕ್ಕೆ 50 ಮಿಲಿಯನ್ ಲಸಿಕೆ ನೀಡಲಾಗುವುದು ಎಂದು ಕಂಪನಿ ಸಿಇಒ ಅದರ್ ಪೂನಾವಾಲಾ ಹೇಳಿದ್ದಾರೆ.
2021 ರ ಜುಲೈ ಹೊತ್ತಿಗೆ ಎಸ್ಐಐ 300 ಮಿಲಿಯನ್ ಲಸಿಕೆ ಉತ್ಪಾದಿಸಲಿದೆ. ಕಂಪನಿ ಇದುವರೆಗೆ 40 ರಿಂದ 50 ಮಿಲಿಯನ್ ಡೋಸ್ ಲಸಿಕೆ ಸಿದ್ಧ ಮಾಡಿ ಸಂಗ್ರಹಿಸಿದೆ. ಪ್ರತಿ ತಿಂಗಳು 100 ಮಿಲಿಯನ್ ಲಸಿಕೆ ತಯಾರು ಮಾಡುವ ಸಾಮರ್ಥ್ಯ ಹೊಂದಿದೆ. ಸರ್ಕಾರದಿಂದ ಅನುಮೋದನೆ ದೊರೆತ ತಕ್ಷಣ ಹಂಚಿಕೆ ಪ್ರಾರಂಭಿಸಲಿದೆ ಎಂದು ಪೂನಾವಾಲಾ ಹೇಳಿದ್ದಾರೆ.
ಭಾರತ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ. ಇಲ್ಲಿ ಪೂರೈಕೆಗೆ ಭಾರಿ ಪ್ರಮಾಣದ ಲಸಿಕೆ ಬೇಕು. ವಿತರಣೆ ಪ್ರಾರಂಭಿಸಿದ ಮೊದಲ ಆರು ತಿಂಗಳು ಲಸಿಕೆಯ ಕೊರತೆ ಎದುರಾಗಲಿದೆ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.