ಕೊರೊನಾಗೆ ಲಸಿಕೆ ಯಾವ ದೇಶ ಮೊದಲು ತಯಾರು ಮಾಡುತ್ತಿದೆ…? ಎಲ್ಲಿ ಸಿಗಬಹುದು…? ಎಷ್ಟು ಹಣವಾಗುವುದು….? ಇಂತಹ ಪ್ರಶ್ನೆಗಳು ನಿರಂತರವಾಗಿ ಜನರ ಮಧ್ಯೆ ಕೇಳಿಸುತ್ತಿದೆ. ಈ ನಡುವೆ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ- ಕೋಡಜೆನಿಕ್ಸ್ ಕೊರೊನಾ ಹತ್ತಿಕ್ಕಲು ಮೂಗಿನ ಮೂಲಕ ನೀಡಬಹುದಾದ ವ್ಯಾಕ್ಸಿನ್ ಅನ್ನು ತಯಾರಿಸಲು ಆರಂಭಿಸಿದೆ.
ಲಸಿಕೆ ತಯಾರಿಕೆ ಕುರಿತಂತೆ ಯುಎಸ್ ಬಯೋಟೆಕ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಅಮೆರಿಕದಲ್ಲಿ ತನ್ನ ಲಸಿಕೆ ಹಂತ ಒಂದರ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲಾಗುತ್ತದೆ. ಇದನ್ನು ಸಿಡಿ ಎಕ್ಸ್ 005 ಎಂದು ಕರೆಯಲಾಗುತ್ತದೆ, ಈಗಾಗಲೇ ಈಗಾಗಲೇ ಪ್ರಾಣಿಗಳಮೇಲೆ ಅಧ್ಯಯನ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದೆ.
ಕ್ಲಿನಿಕಲ್ ಪೂರ್ವ ಅಧ್ಯಯನವು ಭರವಸೆಯ ಪಲಿತಾಂಶ ತಂದಿದೆ ಎಂದು ಬಯೋಟೆಕ್ ಕಂಪನಿ ಹೇಳಿಕೊಂಡಿದೆ. ಹಾಗೆಯೇ ಸುರಕ್ಷತೆ ಮತ್ತು ಪರಿಣಾಮಕಾರಿ ಸಂಕೇತವನ್ನು ನೀಡಿದೆ ಎಂದು ಕೊಡಜೆನಿಕ್ಸ್ ಸಿಇಒ ಜೆ. ರಾಬರ್ಟ್ ಸ್ಪಷ್ಟಪಡಿಸಿದ್ದಾರೆ.