ಕೊರೋನಾ ಬಂದಾಗಿನಿಂದ ಬಹುತೇಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಆನ್‌ಲೈನ್ ಮೀಟಿಂಗ್, ಝೂಮ್ ಮೀಟಿಂಗ್‌ನಲ್ಲಿ ಅನೇಕ ಬಾರಿ ಹಲವು ಎಡವಟ್ಟು ಆಗಿರುವುದು ನಾವು ನೋಡಿದ್ದೇವೆ. ಆದರೆ ಈ ಬಾರಿ ರಾಜಸ್ತಾನ ಹೈಕೋರ್ಟ್ ಆನ್‌ಲೈನ್ ವಾದ ಮಂಡನೆ ವೇಳೆ ಹಿರಿಯ ವಕೀಲರೊಬ್ಬರು ಹುಕ್ಕಾ ಸೇವಿಸಿರುವ ಘಟನೆ ನಡೆದಿದೆ.
ಹೌದು, ರಾಜಸ್ತಾನ ಹೈಕೋರ್ಟ್‌ನ ವರ್ಚ್ಯುಯಲ್ ವಾದ ಮಂಡನೆ ವೇಳೆ, ಹಿರಿಯ ವಕೀಲ ರಾಜೀವ್ ಧವನ್ ಹುಕ್ಕಾ ಪೈಪ್‌ನಿಂದ ಹುಕ್ಕಾ ಸೇವಿಸಿದ್ದಾರೆ. ಇದನ್ನು ಕಾಣಿಸದಂತೆ ಮಾಡಲು ಅಡ್ಡಲಾಗಿ ಪೇಪರ್ ಹಿಡಿದಿದ್ದಾರೆ. ಆದರೂ ಹೊಗೆ ಕಾಣಿಸಿಕೊಂಡಿರುವುದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ವೇಳೆ ಧವನ್ ಅವರ ವಿರುದ್ಧವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸುತ್ತಿರುವುದು ಕಾಣಬಹುದಾಗಿದೆ.
ರಾಜಸ್ತಾನದ ಬಿಜೆಪಿ ಶಾಸಕ ಮದನ್ ದಿಲವಾರ್ ಅವರು ಬಿಎಸ್‌ಪಿ ಆರು ಶಾಸಕರು ಕಾಂಗ್ರೆಸ್ ಜತೆ ಸೇರಿರುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಘಟನೆ ನಡೆದಿದೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ. ಧವನ್ ಅವರ ನಡೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಸ್ಪೇನ್‌ನ ಕೌನ್ಸೆಲರ್ ಒಬ್ಬರು ಸ್ನಾನದ ವೇಳೆ ಮೀಟಿಂಗ್ ಭಾಗವಹಿಸಿ, ಅಚಾನಕ್ ಆಗಿ ಕ್ಯಾಮರಾ ಆನ್ ಆಗಿತ್ತು. ಇದೇ ವಿಷಯವಾಗಿ ಅವರು ರಾಜೀನಾಮೆ ನೀಡಿದ್ದರು.
https://twitter.com/Amit_knc/status/1293562244622499840?ref_src=twsrc%5Etfw%7Ctwcamp%5Etweetembed%7Ctwterm%5E1293562244622499840%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fsenior-advocate-smokes-hookah-during-rajasthan-high-court-virtual-hearing-video-goes-viral%2F636641