ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದರ ಅರ್ಥ ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನ ಕೊಡುವುದು ಎಂದಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಈ ಬಗ್ಗೆ ಮಾತನಾಡಿದ ನ್ಯಾಯಾಧೀಶ ಅನುಪ್ ಚಿಟ್ಕಾರಾ, “ಇಂದಿನ ದಿನಮಾನದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ವ್ಯಾಪಕವಾಗಿದೆ. ಜನರು ಸಂಪರ್ಕ ಬೆಳೆಸಲು, ಜ್ಞಾನ ವರ್ಧನೆಗಾಗಿ ಹಾಗೂ ಮನರಂಜನೆಗೆಂದು ಸಾಮಾಜಿಕ ಜಾಲತಾಣ ಬಳಸುತ್ತಾರೆ. ಆದರೆ ಲೈಂಗಿಕವಾಗಿ ಹಾಗೂ ಮಾನಸಿಕವಾಗಿ ದೌರ್ಜನ್ಯಕ್ಕೆ ಒಳಗಾಗಲು ಅಲ್ಲ” ಎಂದು ತಿಳಿಸಿದ್ದಾರೆ.
ನವೆಂಬರ್ 2019ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ 19 ವರ್ಷದ ಟೀಜೇನರ್ ಒಬ್ಬನ ತನಿಖೆ ನಡೆಸುತ್ತಿದ್ದ ವೇಳೆ ಈ ತೀರ್ಪನ್ನು ಹೈಕೋರ್ಟ್ ಕೊಟ್ಟಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ತನಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ ಸಂತ್ರಸ್ತೆ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾಳೆ ಎಂದು ಆಪಾದಿತ ಆರೋಪಿಸಿದ್ದ.
“ಸಂತ್ರಸ್ತೆಯು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಮಾತ್ರಕ್ಕೆ ತನ್ನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಲು ಆಕೆ ಆಹ್ವಾನ ಕೊಟ್ಟಳು ಎಂದರ್ಥವಲ್ಲ” ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಒಂದು ವೇಳೆ ಸಂತ್ರಸ್ತೆಯೇ ಒಪ್ಪಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದರೂ ಸಹ ಭಾರತದಲ್ಲಿರುವ ಕಾನೂನುಗಳ ಪ್ರಕಾರ, ಅಪ್ರಾಪ್ತ ವಯಸ್ಸಿನವರು ಲೈಂಗಿಕ ಕ್ರಿಯೆಗೆ ಅನುಮತಿ ಕೊಡುವುದು ನಿಷಿದ್ಧವಾಗಿದ್ದು, ಇಂಥ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನವರ ಅನುಮತಿಯೂ ಸಹ ಲೆಕ್ಕಕ್ಕೆ ಬರುವುದಿಲ್ಲ ಎಂದು ಪೀಠ ತಿಳಿಸಿದೆ.