ನವದೆಹಲಿ: ಅಮೆರಿಕ ಅಧ್ಯಕ್ಷರ ವಿಮಾನ ಮಾದರಿಯ ಅತ್ಯಾಧುನಿಕ ಸುರಕ್ಷತಾ ವಿಮಾನ ಪ್ರಧಾನಿ ಮೋದಿ ಸಂಚಾರಕ್ಕೆ ಸಿದ್ಧಾಗುತ್ತಿದೆ.
ಏರ್ಪೋರ್ಸ್ ಒನ್ ಮಾದರಿಯ ಕ್ಷಿಪಣಿ ದಾಳಿಗೂ ಜಗ್ಗದ ಅತ್ಯಾಧುನಿಕ ವಿಮಾನದಲ್ಲಿ ಮೋದಿ ಸಂಚರಿಸಲಿದ್ದಾರೆ. ಅಮೆರಿಕದ ಬೋಯಿಂಗ್ ಕಂಪನಿಗೆ ಏರ್ ಇಂಡಿಯಾದ ಎರಡು ವಿಮಾನಗಳನ್ನು ಕಳುಹಿಸಲಾಗಿದ್ದು ಈ ವಿಮಾನಗಳು ಜುಲೈನಲ್ಲಿ ಹಸ್ತಾಂತರವಾಗಬೇಕಿದೆ.
ಕೊರೋನಾ ಲಾಕ್ ಡೌನ್ ಸೇರಿ ಹಲವು ಕಾರಣಗಳಿಂದ ಹಸ್ತಾಂತರ ವಿಳಂಬವಾಗಿದ್ದು, ಸೆಪ್ಟಂಬರ್ ಗೆ ಈ ವಿಮಾನಗಳು ಭಾರತಕ್ಕೆ ಬರಲಿವೆ. ಅತ್ಯಾಧುನಿಕ ಸುರಕ್ಷತಾ ಸಾಧನಗಳನ್ನು ಒಳಗೊಂಡ ಮತ್ತು ರಕ್ಷಣಾ ವ್ಯವಸ್ಥೆಗಳು ಇರುವ ವಿಮಾನಗಳನ್ನು ಬರೋಬ್ಬರಿ 1400 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೆರಿಕ ಭಾರತಕ್ಕೆ ನೀಡಿದೆ. ಪ್ರಸ್ತುತ ಪ್ರಧಾನಿ ಮತ್ತು ಗಣ್ಯರು ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಲಿದ್ದು ಗಣ್ಯವ್ಯಕ್ತಿಗಳು ಸಂಚರಿಸದ ಸಮಯದಲ್ಲಿ ಪ್ರಯಾಣಿಕರ ಬಳಕೆಗೆ ವಿಮಾನಗಳನ್ನು ನೀಡಲಾಗುತ್ತದೆ. ಇನ್ನು ಮುಂದೆ ಅತ್ಯಾಧುನಿಕ ಏರ್ ಫೋರ್ಸ್ ಒನ್ ಮಾದರಿಯ ವಿಮಾನಗಳು ಪ್ರಧಾನಿ ಮತ್ತು ಗಣ್ಯರ ಸಂಚಾರಕ್ಕೆ ಬರಲಿದ್ದು ಅವುಗಳನ್ನು ವಾಯುಪಡೆಯ ಪೈಲಟ್ ಗಳು ಚಾಲನೆ ಮಾಡಲಿದ್ದಾರೆ.