alex Certify ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ಲೈನ್ ಕಲಿಕೆಗೆ ಶ್ರದ್ದೆಯಿಂದ ಕುಳಿತ ಮಂಗಗಳು…!

ಕೊರೊನಾ ಕಾರಣದಿಂದ ಎಲ್ಲೆಡೆ ಮಕ್ಕಳಿಗೆ ಆನ್ ಲೈನ್ ಕಲಿಕೆ ನಡೆಯುತ್ತಿದೆ. ಈಗ ಮೂರು ಮಂಗಗಳು ಆನ್ ಲೈನ್ ಕಲಿಕೆಗೆ ಮುಂದಾದ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ.

ಐಎಎಸ್ ಅಧಿಕಾರಿ ಅವಾನಿಶ್ ಶರಣ್ ಕಳೆದ ತಿಂಗಳು ಈ ಫೋಟೋ ಶೇರ್ ಮಾಡಿದ್ದರು.‌ ಅದನ್ನು ಸದ್ಯ ನೀಲೇಶ್ ತ್ರಿವೇದಿ ಎಂಬುವವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಬಾಲಕಿ ಯುನಿಫಾರ್ಮ್ ಹಾಕಿ ಕುಳಿತು ಆನ್ ಲೈನ್ ಕ್ಲಾಸ್‌ ನೋಡುತ್ತಿದ್ದರೆ ಕಿಟಕಿಯಲ್ಲಿ ಹಿಂಬದಿಗೆ ಮೂರು ಮಂಗಗಳು ಬಂದು ಕುಳಿತು ವಿಡಿಯೋ ನೋಡುತ್ತಿವೆ.

ಈ ಫೋಟೋಕ್ಕೆ ಹಲವರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.‌ ಪಾಲಕರು ಆಕೆಯ ಆನ್ ಲೈನ್ ಕ್ಲಾಸ್ ಗೆ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.‌ ಮಕ್ಕಳು ಹೆಚ್ಚು ಹೊತ್ತು ಇಯರ್ ಫೋನ್ ಹಾಕಿಕೊಂಡಿರುವುದು ಒಳ್ಳೆಯದಲ್ಲ ಎಂದು ಒಬ್ಬರು ಎಚ್ಚರಿಸಿದ್ದಾರೆ. ಇನ್ನೊಬ್ಬರು ಬಾಲಕಿಯ ಏಕಾಗ್ರತೆಯ ಬಗ್ಗೆ ಮಾತನಾಡಿದ್ದು, ಮಂಗಗಳು ಆಕೆಯ ಹಿಂದಿನ ಬೆಂಚ್ ನಲ್ಲಿ ಕುಳಿತಿದ್ದರೂ ಆಕೆ ಆ ಕಡೆ ನೋಡದೇ ತರಗತಿಯಲ್ಲಿ ಭಾಗವಹಿಸಿದ ಬಗ್ಗೆ ಶಹಭಾಸ್ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...