
ಇದೇ ಮಾತಿಗೆ ಸಾಕ್ಷಿ ಎಂಬಂತೆ ಎಟಿಎಂ ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್ ಒಬ್ಬ ಓದಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವಿನಾಶ್ ಶರಣ್ ಎಂಬವರು ಟ್ವಿಟರ್ನಲ್ಲಿ ಈ ಫೋಟೋವನ್ನ ಶೇರ್ ಮಾಡಿದ್ದಾರೆ.
ಈ ಫೋಟೋವನ್ನ ಶೇರ್ ಮಾಡಿರುವ ಅವಿನಾಶ್, ಅಗ್ನಿ ಎಲ್ಲಿದೆ ಅನ್ನೋದು ಮುಖ್ಯವಲ್ಲ. ಎಲ್ಲೇ ಇದ್ದರೂ ಅಗ್ನಿ ಪ್ರಜ್ವಲಿಸುತ್ತಲೇ ಇರಬೇಕು ಎಂದು ಶೀರ್ಷಿಕೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಈ ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ಫೋಟೋ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಭಾರೀ ವೈರಲ್ ಆಗಿದೆ. ಕಮೆಂಟ್ ಸೆಕ್ಷನ್ನಲ್ಲಿ ಇಂತದ್ದೇ ಅನೇಕ ಘಟನೆಗಳನ್ನ ನೆಟ್ಟಿಗರು ಶೇರ್ ಮಾಡಿದ್ದಾರೆ. ಅನೇಕರು ಈ ಅಪರಿಚಿತ ವ್ಯಕ್ತಿಯ ಕಲಿಯುವ ಹಂಬಲಕ್ಕೆ ತಲೆಬಾಗಿದ್ದಾರೆ.
ಇಂತಹ ಘಟನೆ ಬೆಳಕಿಗೆ ಬಂದಿರೋದು ಇದೇ ಮೊದಲೇನಲ್ಲ. ಈ ಹಿಂದೆ ಅಂದರೆ 2019ರಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ತನ್ನ ಡ್ಯೂಟಿ ವೇಳೆಯಲ್ಲೇ ಅಭ್ಯಾಸ ಮಾಡಿ ಜೆಎನ್ಯು ಪ್ರವೇಶಾತಿ ಪರೀಕ್ಷೆಯನ್ನ ಪಾಸ್ ಮಾಡಿ ಸುದ್ದಿಯಾಗಿದ್ದರು.