ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶ ಅಮೆರಿಕಾವನ್ನು ಹಿಂದಿಕ್ಕಿದೆ. ಏಪ್ರಿಲ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕೊರೊನಾದಿಂದ ಬೇಸತ್ತಿರುವ ಜನರು ಎಂದು ಈ ಕೊರೊನಾದಿಂದ ಮುಕ್ತಿ ಎಂದು ಪ್ರಶ್ನೆ ಮಾಡ್ತಿದ್ದಾರೆ. ಇದ್ರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ತಜ್ಞರು ಕೊರೊನಾ ಅಲೆ ಎಂದು ಕಡಿಮೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಐಐಟಿ ವಿಜ್ಞಾನಿಗಳು ಕೊರೊನಾ ಬಗ್ಗೆ ಆತಂಕದ ವಿಷ್ಯ ಬಹಿರಂಗಪಡಿಸಿದ್ದಾರೆ. ಕೊರೊನಾ ಮೇ 14ರಿಂದ 18ರವರೆಗೆ ಅತಿ ಹೆಚ್ಚಾಗಲಿದೆ. ಸಕ್ರಿಯ ಪ್ರಕರಣದ ಸಂಖ್ಯೆ 48 ಲಕ್ಷದವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 25ರವರೆಗೆ 28 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣವಿದೆ. ಮೇ ಅಂತ್ಯದ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ಸದ್ಯ ಭಯ ಹುಟ್ಟಿಸಿದೆ. ಮೇ 4ರಿಂದ 8ರ ವೇಳೆಗೆ ಕೊರೊನಾ ಸಕ್ರಿಯ ಪ್ರಕರಣ ಪ್ರತಿದಿನ 4.4 ಲಕ್ಷದಷ್ಟಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ವಿಜ್ಞಾನಿಗಳು ಈ ವರದಿಯನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕ್ತಿದ್ದಾರೆ.