alex Certify ಆನ್‌ ಲೈನ್‌ ಕ್ಲಾಸ್‌ ವೇಳೆ ಐನಾತಿ ಐಡಿಯಾ ಮಾಡಿದ ವಿದ್ಯಾರ್ಥಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ ಲೈನ್‌ ಕ್ಲಾಸ್‌ ವೇಳೆ ಐನಾತಿ ಐಡಿಯಾ ಮಾಡಿದ ವಿದ್ಯಾರ್ಥಿ…!

ಮೊದಲೆಲ್ಲ ಶಾಲೆಯಲ್ಲಿ ಹೋಂ ವರ್ಕ್​ ಏಕೆ ಮಾಡಿಲ್ಲ ಎಂದು ಶಿಕ್ಷಕರು ಪ್ರಶ್ನೆ ಮಾಡಿದ್ರೆ ನೋಟ್​ಬುಕ್​​ ಮನೆಲಿ ಬಿಟ್ಟು ಬಂದೆ ಎಂದು ಸಬೂಬನ್ನ ನೀಡಬಹುದಿತ್ತು. ಆದರೆ ಇವಾಗ ಆನ್​ಲೈನ್​ ಕ್ಲಾಸ್​ಗಳು ನಡೀತಾ ಇರೋದ್ರಿಂದ ಈ ಸುಳ್ಳನ್ನ ಹೇಳೋಕೆ ಸಾಧ್ಯವೇ ಇಲ್ಲ.

ಆದರೆ ಇಲ್ಲೊಬ್ಬ ವಿದ್ಯಾರ್ಥಿ ಈ ಸಮಸ್ಯೆಗೂ ಒಂದು ಸಲ್ಯೂಷನ್​ ಹುಡುಕಿದ್ದಾನೆ. ಶಿಕ್ಷಕಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಆತ ತನ್ನ ಯೂಸರ್​ ನೇಮ್​ನಲ್ಲಿ ರೀ ಕನೆಕ್ಟಿಂಗ್​ ಎಂದು ಟೈಪ್​ ಮಾಡಿದ್ದಾನೆ. ಸ್ವತಃ ಶಿಕ್ಷಕಿಯ ಪತಿ ಈ ವಿಚಾರವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ನನ್ನ ಪತ್ನಿ ಶಿಕ್ಷಕಿಯಾಗಿರೋದ್ರಿಂದ ಜೂಮ್​ ಕ್ಲಾಸ್​ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಾಳೆ. ಈಕೆಯ ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರ ನೀಡಲು ಅಶಕ್ತನಾದಾಗೆಲ್ಲ ರಿ ಕನೆಕ್ಟಿಂಗ್​ ಎಂದು ತನ್ನ ಹೆಸರನ್ನ ಬದಲಾಯಿಸಿಕೊಂಡುಬಿಡ್ತಾನೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಈತನ ಶಿಕ್ಷಣ ಸಾಮರ್ಥ್ಯದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಯಾಕಂದ್ರೆ ಈ ವಿದ್ಯಾರ್ಥಿ ಬಹಳ ಬುದ್ಧಿವಂತ ಎಂದೂ ಟ್ವೀಟಾಯಿಸಿದ್ದಾರೆ. ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...