ನವದೆಹಲಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 2020 -21ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಅವಧಿ ಮತ್ತು ಪಠ್ಯಕ್ರಮ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಠ್ಯಕ್ರಮವನ್ನು ಕಡಿಮೆ ಮಾಡಲು ಪೋಷಕರು ಮತ್ತು ಶಿಕ್ಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್, ಪ್ರಸಕ್ತ ಶೈಕ್ಷಣಿ ಸಾಲಿನಲ್ಲಿ ಪಠ್ಯ, ತರಗತಿಯ ಅವಧಿಯನ್ನು ಕಡಿತ ಮಾಡಲು ಸಲಹೆ ನೀಡುವಂತೆ ಕೋರಿದ್ದಾರೆ.
ಶಾಲಾ, ಕಾಲೇಜುಗಳನ್ನು ಆರಂಭಿಸುವ ಕುರಿತಾಗಿ ಕೇಂದ್ರ ಸರ್ಕಾರ ರಾಜ್ಯಗಳ ಅಭಿಪ್ರಾಯವನ್ನು ಕೇಳಿದೆ. ಹಂತ ಹಂತವಾಗಿ ತರಗತಿ ಆರಂಭಿಸಬೇಕು. ಹಾಜರಾತಿ ಕಡ್ಡಾಯ ಮಾಡಬಾರದು. ದಿನ ಬಿಟ್ಟು ದಿನ ಬಿಟ್ಟು ದಿನ ಶಾಲೆಗೆ ಬರಲು ಅವಕಾಶ ನೀಡಬೇಕೆಂಬುದು ಸೇರಿದಂತೆ ಹಲವು ಸಲಹೆ ಕೇಳಿಬಂದಿವೆ. ಸಲಹೆ ಪಡೆದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.