ನವದೆಹಲಿ: ಕೊರೊನಾ ನಡುವೆಯೂ ಅಕ್ಟೋಬರ್ 15 ರಿಂದ ಶಾಲೆಗಳನ್ನು ಆರಂಭಿಸಲು ಗೃಹಸಚಿವಾಲಯ ವತಿಯಿಂದ ಅನುಮತಿ ನೀಡಲಾಗಿದೆ.
ಆದರೆ, ಶಾಲೆಗಳನ್ನು ಆರಂಭಿಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆಸಿಕೊಳ್ಳುವ ವಿಚಾರ ಶಾಲೆಯ ಆಡಳಿತ ಮಂಡಳಿಗಳ ವಿವೇಚನೆಗೆ ಬಿಟ್ಟಿದ್ದು ಕೊರೊನಾ ಪರಿಸ್ಥಿತಿಯನ್ನು ಆಧರಿಸಿ ಶಾಲೆಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ಹಂತಹಂತವಾಗಿ ತೆರೆಯುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ.
ಅಕ್ಟೋಬರ್ 15 ರಿಂದ ಶಾಲೆಗಳ ಆರಂಭ ಕಡ್ಡಾಯವಲ್ಲ ಎಂದು ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಗೃಹ ಸಚಿವಾಲಯ ಅಕ್ಟೋಬರ್ 15 ರಿಂದ ಶಾಲೆಗಳ ಆರಂಭಕ್ಕೆ ಅವಕಾಶ ನೀಡಿರುವುದರಿಂದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಚಿಂತನೆ ನಡೆದಿದೆ. ಆದರೆ, ಪೋಷಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.