ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಥರದ ಕಂಟೆಂಟ್ ಶೇರ್ ಮಾಡದೇ ಇರಲು ಆದೇಶ ನೀಡಿದ್ದ ಹೈಕೋರ್ಟ್‌ನ ಆದೇಶವೊಂದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ತಂದಿದೆ.
ಆದರೆ ಅಭಿಪ್ರಾಯ ಸ್ವಾತಂತ್ರ‍್ಯದ ಹೆಸರಿನಲ್ಲಿ ಯಾವುದೇ ಧರ್ಮದ ಭಾವನೆಗಳಿಗೆ ನೋವುಂಟು ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಫಾತಿಮಾಗೆ ವಾರ್ನಿಂಗ್ ಕೊಟ್ಟಿದೆ. ಅಡುಗೆ ಶೋ ಒಂದನ್ನು ನಡೆಸಿಕೊಡುವ ನೆವದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದ ಆಪಾದನೆ ಮೇಲೆ ರೆಹಾನಾರನ್ನು ವಿಡಿಯೋ ಅಪ್ಲೋಡಿಂಗ್ ಮಾಡದಂತೆ ಕೇರಳ ಹೈಕೋರ್ಟ್ ನವೆಂಬರ್ 23, 2020ರಲ್ಲಿ ಎಚ್ಚರಿಕೆ ಕೊಟ್ಟಿತ್ತು.
ಸಂಕಷ್ಟದ ಹೊತ್ತಲ್ಲೇ ಸರ್ಕಾರಕ್ಕೆ ಮತ್ತೊಂದು ಶಾಕ್
ನ್ಯಾಯಾಧೀಶ ರೋಹಿಂಟನ್ ಫಾಲಿ ನಾರಿಮನ್ ನೇತೃತ್ವದ ಪೀಠವು ಫಾತಿಮಾಳ ಅರ್ಜಿಯನ್ನು ಆಲಿಸಿದ್ದು, ಹೈಕೋರ್ಟ್ ಆಕೆಯ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲು ಸೂಚಿಸಿದೆ. ರೆಹಾನಾ ಮೇಲಿನ ಪ್ರಕರಣದ ತನಿಖೆ ಮುಗಿಯುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಆಕೆ ಯಾವುದೇ ರೀತಿಯ ಕಂಟೆಂಟ್ ಅಪ್ಲೋಡ್ ಮಾಡಬಾರದೆಂದು ಹೈಕೋರ್ಟ್ ನಿರ್ಬಂಧ ಹೇರಿತ್ತು.