ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಗೆ ತಾತ್ಕಾಲಿಕ ಬ್ರೇಕ್ ಹಾಕಿರುವ ಸುಪ್ರಿಂ ಕೋರ್ಟ್ ಕೃಷಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಸಮಿತಿಯ ಸದಸ್ಯರಾಗುವಂತೆ ರೈತರಿಗೆ ಕೇಳಿದೆ. ಈ ನಡುವೆ ಪ್ರತಿಭಟನಾ ನಿರತ ರೈತರು ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಪರೇಡ್ಗೆ ತಯಾರಿ ನಡೆಸಿದ್ದಾರೆ.
ಪಂಜಾಬ್ನ ಮೊಗಾ ಎಂಬ ಹಳ್ಳಿಯೊಂದರಲ್ಲಿ ಟ್ರ್ಯಾಕ್ಟರ್ ಪರೇಡ್ಗೆ ಟ್ರ್ಯಾಕ್ಟರ್ ಕಳಿಸಲು ಒಪ್ಪದ ರೈತರಿಗೆ ದಂಡ ವಿಧಿಸೋದಾಗಿ ಘೋಷಣೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯ ಹೊರತಾಗಿಯೂ ಈ ಗ್ರಾಮದಿಂದ ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳು ಗರಿಷ್ಟ ಸಂಖ್ಯೆಯಲ್ಲಿ ದೆಹಲಿ ತಲುಪಲಿದೆ ಎನ್ನಲಾಗಿದೆ.
ನಮಗೆ ಸುಪ್ರಿಂ ಕೋರ್ಟ್ನಿಂದ ಯಾವುದೇ ದೊಡ್ಡ ನಿರೀಕ್ಷೆ ಇರಲಿಲ್ಲ. ಕೇಂದ್ರ ಸರ್ಕಾರವೇ ಈ ಕಾನೂನುಗಳನ್ನ ವಾಪಸ್ ಪಡೆಯಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಮಗೆ ಅಲ್ಪಸ್ವಲ್ಪ ಸಹಾಯ ಮಾಡಬಹುದು. ನಾವು ಯಾವುದೇ ಸಮಿತಿಗೆ ಹೋಗೋದಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದೇವೆ. ಸರ್ಕಾರದ ಪರವಾದ ಸದಸ್ಯರುಳ್ಳ ಸಮಿತಿಯೊಂದಿಗೆ ಚರ್ಚೆ ಮಾಡಲು ನಾವು ಸಿದ್ಧರಿಲ್ಲ. ಹೀಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕೆಎಂಎಸ್ಸಿಯ ಪ್ರಧಾನ ಕಾರ್ಯದರ್ಶಿ ಸಾವರ್ನ್ ಸಿಂಗ್ ಪಾಂಡರ್ ಹೇಳಿದ್ದಾರೆ.
ಆದರೆ ಸುಪ್ರಿಂ ಕೋರ್ಟ್ನ ವಿಚಾರಣೆಯಿಂದಾಗಿ ಸರ್ಕಾರವು ರೈತರ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದಿದೆ ಎಂಬುದು ಮನದಟ್ಟಾಗಿದೆ. ಇದು ಕೃಷಿಕರ ಚಿಂತನೆಯನ್ನ ಇನ್ನಷ್ಟು ಬಲಪಡಿಸಿದೆ. ಟ್ರ್ಯಾಕ್ಟರ್ ರ್ಯಾಲಿ ಅಂದರೆ ನಾವು ಹಿಂಸಾಚಾರವನ್ನ ಬೆಂಬಲಿಸುತ್ತೇವೆ ಎಂದು ಅರ್ಥವಲ್ಲ. ಈ ಮೆರವಣಿಗೆಯಿಂದ ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದ್ರು.