ಆರೋಪಿಗಳಿಗೆ ಕಾಗದದ ರೂಪದಲ್ಲಿ ಸಮನ್ಸ್ ನೀಡುವ ಬದಲು ಎಸ್ಎಂಎಸ್, ವಾಟ್ಸಾಪ್ ಹಾಗೂ ಇಮೇಲ್ ಮೂಲಕ ಸಮನ್ಸ್ ನೀಡಲು ಸುಪ್ರೀಂ ಕೋರ್ಟ್ ಚಿಂತನೆ ನಡೆದಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲ್ ವಿಧಾನವನ್ನ ಅಳವಡಿಸಿಕೊಳ್ಳಲು ಮುಂದಾಗಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ರಾಜ್ಯದ ಎಲ್ಲಾ ಹೈಕೋರ್ಟ್ ಹಾಗೂ ರಾಜ್ಯ ಡಿಜಿಪಿಗಳ ಅಭಿಪ್ರಾಯ ಕೇಳಿದೆ.
ಈ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ಎಲ್. ನಾಗೇಶ್ವರ ನೇತೃತ್ವದ ನ್ಯಾಯಪೀಠ, ಹಿರಿಯ ವಕೀಲರು ನೀಡಿರುವ ವರದಿ ಸಂಬಂಧ 4 ವಾರಗಳೊಳಗಾಗಿ ಸಲಹೆ ನೀಡುವಂತೆ ಹೈಕೋರ್ಟ್ ಹಾಗೂ ರಾಜ್ಯ ಡಿಜಿಪಿಗಳಿಗೆ ಸೂಚನೆ ನೀಡಿದೆ.
ಕರೊನಾ ವೈರಸ್ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನದ ಅಳವಡಿಕೆ ಇನ್ನಷ್ಟು ಪೂರಕ ಕ್ರಮವಾಗಿದೆ. ಈ ಬಗ್ಗೆ ಸ್ಟ್ಯಾಟಿಸ್ಟಾ ಡಾಟ್ ಕಾಮ್ ವರದಿ ಮಾಡಿದ್ದು, ಭಾರತದಲ್ಲಿ ಸುಮಾರು 448 ಮಿಲಿಯನ್ ಮೊಬೈಲ್ ಬಳಕೆದಾರರು ಇದ್ದಾರೆ. ಸುಪ್ರೀಂ ಕೋರ್ಟ್ ಈ ರೀತಿ ಸಮನ್ಸ್ ನೀಡಲು ಡಿಜಿಟಲ್ ಫ್ಲಾಟ್ಫಾರಂ ಮೊರೆ ಹೋದರೆ ಸಾಮಾಜಿಕ ಅಂತರವೂ ಕಾಪಾಡಿದಂತೆ ಆಗುತ್ತದೆ ಮತ್ತು ತನಿಖೆ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳ್ಳಲಿದೆ ಅಂತಾ ವರದಿ ಮಾಡಿದೆ.