ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನ ಆಕೆಯ ಮಾಜಿ ಪ್ರಿಯತಮ ಕೊಲೆ ಮಾಡಿ ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಲಾಗಿದ್ದು, ಆಕೆ ಬೇರೆಯವನ ಜೊತೆ ಪ್ರೇಮ ಸಂಬಂಧ ಹೊಂದಿದ್ದನ್ನ ಸಹಿಸಲಾಗದೇ ಈ ರೀತಿ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಗಾರೆ ಕೆಲಸ ಮಾಡಿಕೊಂಡಿದ್ದ ರಾಜೇಶ್ ಸ್ನೇಹಲತಾ ಎಂಬಾಕೆಯನ್ನ ಪ್ರೀತಿ ಮಾಡುತ್ತಿದ್ದ. ಆದರೆ ಸ್ನೇಹಲತಾ ಗುತ್ತಿಗೆ ಆಧಾರದಲ್ಲಿ ಎಸ್ಬಿಐನಲ್ಲಿ ಕೆಲಸ ಪಡೆದ ಬಳಿಕ ಈತನಿಂದ ದೂರವಾಗಿದ್ದಳು. ಅಲ್ಲದೇ ತನ್ನ ಸಹಪಾಠಿಯೊಂದಿಗೆ ಆಕೆ ಹತ್ತಿರವಾಗುತ್ತಿದ್ದುದ್ದನ್ನ ಸಹಿಸಲಾಗದೇ ರಾಜೇಶ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಸ್ನೇಹಲತಾಲಳನ್ನ ಭೇಟಿಯಾಗೋದಕ್ಕೆ ಕರೆದ ರಾಜೇಶ್, ಆಕೆಯನ್ನ ಬೈಕ್ನಲ್ಲಿ ಕೂರಿಸಿಕೊಂಡು ಮದನ್ಪಲ್ಲಿ ಬಳಿ ಇಳಿಸಿದ್ದಾನೆ. ಅಲ್ಲಿ ಆಕೆ ಬೇರೊಬ್ಬನ ಜೊತೆ ಇರೋದರ ಬಗ್ಗೆ ಕ್ಯಾತೆ ತೆಗೆದ ರಾಜೇಶ್ ಬಳಿಕ ಆಕೆಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.