
ಕ್ವಾರಂಟೈನ್ ಕೇಂದ್ರದಲ್ಲಿರುವವರ ಒತ್ತಡ ಕಡಿಮೆ ಮಾಡಿ ಉತ್ಸಾಹ ಹೆಚ್ಚಿಸಲು ಬಿಹಾರದಲ್ಲಿ ವಿವಿಧ ಕಡೆ ಪ್ರಯತ್ನಗಳು ನಡೆಯುತ್ತಿದೆ.
ಅಲ್ಲಿನ ಸಿವಾನ್ ಪಟ್ಟಣದ ಜುವಾಫರ್ ಕ್ವಾರಂಟೈನ್ ಕೇಂದ್ರದಲ್ಲಿ ವಾಸ್ತವ್ಯ ಮಾಡಿರುವವರು ಬಾರ್ಡರ್ ಚಿತ್ರದ ಸಂಡೇ ಸೆ ಆತೇ ಹೈ…..ಹಾಡಿಗೆ ಖುಷಿಯಿಂದ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿದೆ.
ರಾಹುಲ್ ಶ್ರೀವಾತ್ಸವ್ ಎಂಬುವವರು ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾವಿರಾರು ವೀಕ್ಷಣೆ ಕಂಡಿದೆ.
ಈ ಹಿಂದೆ ಬಿಹಾರದ ಬೆಲ್ಸಾಂಡ್ ನ ಗುರುಶರಣ್ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಯೋಗ, ಅಂತ್ಯಾಕ್ಷರಿ, ಆಟ, ಸಾಂಸ್ಕೃತಿಕ ಚಟುವಟಿಕೆ ನಡೆಸಿದ್ದರ ಬಗ್ಗೆ ವರದಿಯಾಗಿತ್ತು.