ಭಾರತದಲ್ಲಿ ಸಲಿಂಗಕಾಮಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ ಕೂಡ ಸಮಾಜದಲ್ಲಿ ಇದನ್ನ ಕಳಂಕ ಎಂದೇ ಪರಿಗಣಿಸಲಾಗುತ್ತಿದೆ.
ಇದೇ ಕಾರಣದಿಂದಾಗಿ ಭಾರತದಲ್ಲಿ ಅನೇಕ ಸಲಿಂಗಕಾಮಿಗಳು ಸಮಾಜದಿಂದ ತಿರಸ್ಕೃತರಾಗಿದ್ದಾರೆ. ಹಾಗೆ ಉತ್ತರ ಪ್ರದೇಶದ ಸಲಿಂಗಕಾಮಿ ದಂಪತಿಯೊಂದು ಕುಟುಂಬಸ್ಥರಿಂದ ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿವೆ.
ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆ ಹೇಳಿದ ಪ್ರಕಾರ, ಅವರಿಬ್ಬರನ್ನ ರೂಮಿನಲ್ಲಿ ಕೂಡಿ ಹಾಕಲಾಗಿತ್ತು. ಇಲ್ಲಿಂದ ಪಾರಾಗಿ ಬಂದ ಮಹಿಳೆ ಪೊಲೀಸರ ಬಳಿ ಸಹಾಯ ಕೇಳಿದ್ದಾರೆ. ಗೋಡೆ ಹಾರಿ ಪೊಲೀಸರನ್ನ ತಲಪುವಲ್ಲಿ ಯಶಸ್ವಿಯಾದ ಮಹಿಳೆ ತನ್ನ ಸಂಗಾತಿಯನ್ನ ಪೊಲೀಸರ ಸಹಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ 11ತಿಂಗಳ ಕಂದ; ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿಗೆ ಪತ್ರ ಬರೆದ ಸಂಸದ
ಇವರಿಬ್ಬರು ಮಹಿಳೆಯರು ಕಳೆದ ವರ್ಷ ನವೆಂಬರ್ 17ರಂದು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಠಾಕೂರ್ಗಂಜ್ ಠಾಣೆ ಪೊಲೀಸರು ಈ ವೇಳೆ ಸಹಾಯ ಕೂಡ ಮಾಡಿದ್ದರು. ಒಬ್ಬರಿಗೊಬ್ಬರು ವಿವಾಹವಾಗಿದ್ದರೂ ಸಹ ತನ್ನ ಸಂಗಾತಿಯನ್ನ ಕುಟುಂಬಸ್ಥರು ಥಳಿಸಿ ಹಿಂಸೆ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆಕೆಯ ಕೋರಿಕೆಯಂತೆ ಪೊಲೀಸರು ಸೆರೆಯಲ್ಲಿದ್ದ ಇನ್ನೊಬ್ಬ ಮಹಿಳೆಯನ್ನ ರಕ್ಷಿಸಿದ್ದಾರೆ. ಸದ್ಯ ಸಲಿಂಗಿ ದಂಪತಿಗೆ ಕಾನೂನಿನಡಿಯಲ್ಲಿ ರಕ್ಷಣೆ ನೀಡಲಾಗಿದೆ. ಕುಟುಂಬಸ್ಥರನ್ನ ಕೌನ್ಸೆಲಿಂಗ್ ಮಾಡಲಾಗುತ್ತಿದ್ದು ಹಿಂಸೆ ಮುಂದುವರಿಸಿದ್ರೆ ಶಿಕ್ಷೆ ನೀಡಬೇಕಾಗುತ್ತೆ ಎಂಬ ಎಚ್ಚರಿಕೆ ನೀಡಿದ್ದಾರೆ.