ಪ್ರಖ್ಯಾತ ವಾದಕ ಘಟಂ ಗಿರಿಧರ್ ಉಡುಪ ಮಡಕೆಯಂಥ ವಸ್ತುವೊಂದನ್ನು ಬಳಸಿ, ’ಘಟಂ’ ಎಂಬ ಹೆಸರಿನಲ್ಲಿ ವಾದ್ಯವೊಂದನ್ನು ಮಾಡಿ, ಅದರ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಅದೀಗ ವೈರಲ್ ಆಗಿದೆ.
ಮಡಿಕೆಯ ಮೇಲೆ ತಮ್ಮ ಹಸ್ತಗಳನ್ನು ಬಳಸಿಕೊಂಡು ಪರ್ಫೆಕ್ಟ್ ಆಗಿ ವಾದ್ಯ ಮೂಡಿಸುತ್ತಿರುವ ಅವರ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ’ತಿಶ್ರ ನಾದಾಯ್’ ಎಂಬ ವಾದನವನ್ನು ಘಟಂ ಎಂಬ ಮಣ್ಣಿನ ಮಡಿಕೆಯಂಥ ವಾದ್ಯೋಪಕರಣದಲ್ಲಿ ಮೂಡಿಸುತ್ತಿದ್ದಾರೆ ಈ ವಾದಕ.
ಕರ್ನಾಟಿಕ್ ಸಂಗೀತದಲ್ಲಿ ಈ ಘಟಂ ವಾದ್ಯೋಪಕರಣವನ್ನು ಬಳಸಲಾಗುತ್ತದೆ.
https://www.instagram.com/p/CFbwP-phvQZ/?utm_source=ig_web_copy_link