alex Certify ದಸರಾದಂದು ತಾಜ್ ಮಹಲ್ ನಲ್ಲಿ ಶಿವ ಸ್ತೋತ್ರ ಪಠಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಸರಾದಂದು ತಾಜ್ ಮಹಲ್ ನಲ್ಲಿ ಶಿವ ಸ್ತೋತ್ರ ಪಠಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು

ಸಂಪೂರ್ಣ ಭಾರತವೇ ದಸರಾ ಹಬ್ಬದ ಸಂಭ್ರಮದಲ್ಲಿ ಮಿಂದೆಳ್ತಾ ಇದ್ದರೆ ಆಗ್ರಾದ ತಾಜ್​ಮಹಲ್​ನಲ್ಲಿ ದಸರಾ ದಿನದಂದು ದೊಡ್ಡ ಹಂಗಾಮವೇ ನಡೆದಿದೆ. ತಾಜ್​ಮಹಲ್​ನಲ್ಲಿ ಕೇಸರಿ ಧ್ವಜ ಹಾರೋದ್ರ ಜೊತೆಗೆ ಶಿವ ಸ್ತೋತ್ರವನ್ನ ಪಠಿಸಲಾಗಿದೆ.

ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿ ಹಾಗೂ ಕಾರ್ಯಕರ್ತರು ತಾಜ್​ಮಹಲ್​ ಪ್ರೇಮ ಸ್ಮಾರಕದಲ್ಲಿ ಕೇಸರಿ ಧ್ವಜವನ್ನ ಹಾರಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಪದಾಧಿಕಾರಿ ಗೌರವ್​ ಠಾಕೂರ್​ ತಾಜ್ ಸಂಕೀರ್ಣದ ಒಳಗೆ ಶಿವ ಸ್ತೋತ್ರ ಪಠಿಸಿದ್ದಾರೆ.

ಠಾಕೂರ್​ ಸಂಕೀರ್ಣದಲ್ಲಿ ಕೂತು ಶಿವ ಸ್ತೋತ್ರ ಪಠಿಸುತ್ತಿರುವ ವೇಳೆ ಕಾರ್ಯಕರ್ತನೊಬ್ಬ ಕೇಸರಿ ಧ್ವಜವನ್ನು ಹಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ.

ಇನ್ನು ಈ ಘಟನೆ ಬಗ್ಗೆ ಮಾತನಾಡಿದ ಗೌರವ್​ ಠಾಕೂರ್, ನಮ್ಮ ಸಂಘಟನೆ ತಾಜ್​ಮಹಲ್​ನ್ನು ಶಿವನ ದೇವಾಲಯ ಎಂದು ನಂಬಿದೆ. ಶಿವನ ಮಂದಿರವನ್ನ ನೆಲಸಮ ಮಾಡಿದ ಮೊಘಲ್​ ಚಕ್ರವರ್ತಿ ಶಹಜಹಾನ್​ ಇದನ್ನ ಸ್ಮಾರಕ ಮಾಡಿದ್ದಾನೆ. ಹೀಗಾಗಿ ನಾವಿಲ್ಲಿ ಶಿವ ಸ್ತೋತ್ರ ಪಠಿಸಿದ್ದೇವೆ ಅಂತಾ ಹೇಳಿದ್ರು.

ಇನ್ನು ತಾಜ್​ಮಹಲ್​ನಲ್ಲಿ ಕೇಸರಿ ಧ್ವಜ ಹಾರಿಸಿದ ಯುವಕರನ್ನ ಸಿಐಎಸ್​ಎಫ್​​ ಪಡೆ ವಶಕ್ಕೆ ಪಡೆದಿದೆ ಅಂತಾ ವರದಿಗಳು ತಿಳಿಸಿವೆ . ಕಳೆದ ವರ್ಷ ಕೂಡ ತಾಜ್​ ಮಹಲ್​​ನಲ್ಲಿ ಗಂಗಾಭಿಷೇಕ ಮಾಡಲು ಹಿಂದೂ ಜಾಗರಣ ವೇದಿಕೆ ಯತ್ನಿಸಿತ್ತು. ಆದರೆ ಇದಕ್ಕೆ ಭದ್ರತಾ ಪಡೆ ತಡೆಯೊಡ್ಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...