ಲೈಂಗಿಕ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಯುವ ವೈದ್ಯರೊಬ್ಬರು ಭಿಕ್ಷಾಟನೆಗೆ ಇಳಿದ ವಿಚಿತ್ರ ಘಟನೆ ಮಧುರೈನಲ್ಲಿ ನಡೆದಿದೆ. 2018ರಲ್ಲಿ ಮಧುರೈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಅವರು ಲಿಂಗ ಬದಲಾವಣೆ ಮಾಡಿಕೊಂಡಿದ್ದರು.
ಪೊಲೀಸರು ವೈದ್ಯರ ದಾಖಲೆ ಪರಿಶೀಲಿಸಿದ ಬಳಿಕ ಮಧುರೈ ಕಾಲೇಜಿಗೆ ಕರೆ ಮಾಡಿದ್ದಾರೆ. ಈ ವೇಳೆ ಇವರು ಭಿಕ್ಷಾಟನೆ ಮಾಡುತ್ತಿದ್ದ ಮಹಿಳೆ ವೈದ್ಯೆ ಎಂದು ತಿಳಿದು ಬಂದಿದೆ. ಪುರುಷರಾಗಿ ಜನಿಸಿದ್ದ ಈ ವ್ಯಕ್ತಿ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರು. ವಿದ್ಯಾಭ್ಯಾಸದ ಬಳಿಕ ಒಂದು ವರ್ಷ ನಗರದ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಯನ್ನೂ ಸಲ್ಲಿಸಿದ್ದರು. ಇದಾದ ಬಳಿಕ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.
ವೈದ್ಯ ಈ ರೀತಿ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಿದ್ದಂತೆಯೇ ಇವರನ್ನ ಕೆಲಸದಿಂದ ತೆಗೆದು ಹಾಕಲಾಯ್ತು. ಹೀಗಾಗಿ ಅವರು ಭಿಕ್ಷಾಟನೆ ಮಾಡಲು ಆರಂಭಿಸಿದ್ದಾರೆ. ಪ್ರಮಾಣ ಪತ್ರಗಳಲ್ಲಿ ಅವರ ಲಿಂಗ ಬದಲಾವಣೆ ಮಾಡುವ ಮೂಲಕ ವೈದ್ಯರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಅಂತಾ ತಮಿಳುನಾಡು ಪೊಲೀಸ್ ಜಿ. ಕವಿತಾ ಹೇಳಿದ್ದಾರೆ.