ನವದೆಹಲಿ: ರಾಜಸ್ತಾನದ 31 ದಿನಗಳ ರಾಜಕೀಯ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದ್ದು ಮುನಿಸು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯಲು ಸಚಿನ್ ಪೈಲಟ್ ಮುಂದಾಗಿದ್ದಾರೆ.
ಸಚಿನ್ ಪೈಲೆಟ್ ಅವರ ಬಂಡಾಯವನ್ನು ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿ ತಣಿಸಿದ್ದು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯಲು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ವಿರಸದಿಂದ ಪಕ್ಷವನ್ನೇ ತೊರೆಯಲು ಮುಂದಾಗಿದ್ದ ಸಚಿನ್ ಪೈಲಟ್ 31 ದಿನಗಳ ನಂತರ ನಿರ್ಧಾರ ಬದಲಿಸಿದ್ದಾರೆ. ಸಚಿನ್ ಪೈಲಟ್ ಬೇಡಿಕೆಗೆ ಸ್ಪಂದಿಸಿದ ಕಾಂಗ್ರೆಸ್ ಹೈಕಮಾಂಡ್ ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅಶೋಕ್ ಗೆಹ್ಲೋಟ್ ಗೆ ಕಡಿವಾಣ ಹಾಕಲು ಮುಂದಾಗಿದೆ. ಪೈಲೆಟ್ ಬದಲಿಸಲು ಹೋಗಿ ಸಿಎಂ ಅಶೋಕ್ ಗೆಹ್ಲೋಟ್ ಅವರೇ ಹಳ್ಳಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.