ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗದ್ದಲ ಸೃಷ್ಟಿಯಾಗಿದೆ.
ರೆಹಾನಾ ಫಾತಿಮಾರ ಮಗ ಹಾಗೂ ಮಗಳು ತನ್ನ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸುತ್ತಿರುವ ವಿಡಿಯೋ ಯೂಟ್ಯೂಬ್‌ನಲ್ಲಿ ಸದ್ದು ಮಾಡಿದ್ದು, ಮಹಿಳೆಯರು ತಮ್ಮ ದೇಹವನ್ನು ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲು ಅವಕಾಶ ಕೊಡಬೇಕು ಎಂಬ ಸಂದೇಶ ಸಾರಲಾಗಿದೆ.
ಇದೀಗ ಆಕೆಯ ಈ ಕೆಲಸಕ್ಕೆ ಬೆಂಬಲ ಸೂಚಿಸಿ mansi b ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು, “ತನ್ನ ಎದೆ ಮೇಲೆ ಪೇಯಿಂಟ್ ಮಾಡಲು ತಂದೆಯೊಬ್ಬ ಹೇಳುವುದು ಎಂದರೆ ಅದು ಕಲೆ…! ಆದರೆ ಇದೇ ಕೆಲಸವನ್ನು ಒಬ್ಬ ತಾಯಿ ಮಾಡಿದರೆ ಅದು ಅಸಭ್ಯ ಹಾಗು ಮಕ್ಕಳ ಮೇಲಿನ ದೌರ್ಜನ್ಯವೇ?” ಎಂದು ಪ್ರಶ್ನಿಸಿದ್ದಾರೆ.
“ಒಬ್ಬ ತಾಯಿ ತನ್ನ ಮಗುವಿಗೆ ಎದೆ ಹಾಲುಣಿಸಲು ಅರೆಬೆತ್ತಲಾದರೆ ಅದು ಓಕೆ. ಆದರೆ ತನ್ನ ದೇಹದ ಮೇಲೆ ಚಿತ್ರ ಬಿಡಿಸಲು ಮಕ್ಕಳಿಗೆ ಹೇಳಿದರೆ ಅದನ್ನು ತಪ್ಪು ಎನ್ನಲಾಗುತ್ತದೆ” ಎಂದು ಮತ್ತೊಬ್ಬರು ತಿಳಿಸಿದ್ದಾರೆ.
https://twitter.com/aman_of_culture/status/1292318019167776768?ref_src=twsrc%5Etfw%7Ctwcamp%5Etweetembed%7Ctwterm%5E1292318019167776768%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fkerala-activist-rehana-fatima-has-always-broken-taboos-sabarimala-to-kids-painting-her-semi-nude-body-2771053.html