ದೇಶಭಕ್ತಿ ಸಾರುವ ಸಾರೇ ಜಹಾನ್ ಸೇ ಅಚ್ಛಾ ಹಾಡನ್ನು ದೇಶದ ಅನೇಕ ಹಾಡುಗಾರರ ಧ್ವನಿಯಲ್ಲಿ ಕೇಳಿದ್ದೇವೆ. ಆದರೆ, ರಾಷ್ಟ್ರದ ಪ್ರಾಣಿಗಳ ಬಾಯಿಯಲ್ಲಿ ಎಂದಾದರೂ ಕೇಳಿದ್ದೇವೆಯೇ ? ಹೌದು, ಈ ಹಾಡಿಗೆ ನಮ್ಮ ದೇಶದ ಅನೇಕ ಪ್ರಾಣಿಗಳು ಧ್ವನಿಯಾಗಿವೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಗ ತ್ರಿಪ್ಪಿನ್ ಎಂಬ ಕಪೆಲ್ಲಾ ಬ್ಯಾಂಡ್ ಈ ವಿಶಿಷ್ಟ ಪ್ರಯೋಗ ಮಾಡಿದೆ. ಇದನ್ನು ಅನಿಮಲ್ ಪ್ಲಾನೆಟ್ ಚಾನಲ್ ಮಾಡಿಸಿದ್ದು, ತನ್ನ ಅಧಿಕೃತ ಜಾಲತಾಣದಲ್ಲಿ 1.42 ನಿಮಿಷದ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಬಯಲಾಯ್ತು ದೆಹಲಿ ದಂಗೆಯ ಅಸಲಿಯತ್ತು: ರೈತರ ಪ್ರತಿಭಟನೆಯಲ್ಲಿ ನುಸುಳಿದ ಸಮಾಜಘಾತುಕರು
ವಿಡಿಯೋದ ಆರಂಭದಲ್ಲಿಯೇ ಯಾವ ಪ್ರಾಣಿಯೂ ಹಾನಿಕಾರಕವಲ್ಲ. ಈ ವಿಡಿಯೋ ಮಾಡುವಾಗ ಯಾವುದೇ ಪ್ರಾಣಿಗೆ ತೊಂದರೆ ಕೊಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ವಿಡಿಯೋದಲ್ಲಿ ದೇಶದ ಜೀವವೈವಿಧ್ಯತೆಯ ಅನಾವರಣವಾಗಿದ್ದು, ಮನುಷ್ಯರೇ ಪ್ರಾಣಿಗಳ ಧ್ವನಿಯಲ್ಲಿ ಹಾಡಿರುವ ಈ ಹಾಡಿಗೆ ಅಲ್ಲಲ್ಲಿ ಕೆಲ ಪ್ರಾಣಿಗಳ ಧ್ವನಿಯನ್ನು ಸಂಗೀತದ ಬದಲು ಬಳಸಿಕೊಳ್ಳಲಾಗಿದೆ.