ನವದೆಹಲಿ: ಆಗಸ್ಟ್ 11 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬಿಡುಗಡೆ ಮಾಡಿದ ಕೋವಿಡ್ -19 ಲಸಿಕೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಕುರಿತು ಮಾತನಾಡಿ, ಸ್ಪುಟ್ನಿಕ್ 5 ಲಸಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ರಷ್ಯಾ ಸಂಪರ್ಕದಲ್ಲಿದ್ದು ಆರಂಭಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವದ ಮೊದಲ ಕೊರೋನಾ ಲಸಿಕೆಯನ್ನು ರಷ್ಯಾ ಇತ್ತೀಚಿಗೆ ನೋಂದಾಯಿಸಿದ್ದು ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ರಷ್ಯಾದ 45ಕ್ಕೂ ಹೆಚ್ಚು ವೈದ್ಯಕೀಯ ಕೇಂದ್ರಗಳಲ್ಲಿ 40000ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚೇತರಿಕೆ ಪ್ರಮಾಣಗಳು ಹೆಚ್ಚಿದೆ ಎಂದು ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.