
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೆಂಟಿಲೇಟರ್ ನಲ್ಲಿ ಅವ್ರಿಗೆ ಚಿಕಿತ್ಸೆ ನೀಡಲಾಗ್ತಿದೆ. ಏತನ್ಮಧ್ಯೆ, ಅವರ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಡಿತ್ತು. ಆದ್ರೆ ಇದು ವದಂತಿ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಮಗಳು ಮತ್ತು ಕಾಂಗ್ರೆಸ್ ನಾಯಕಿ ಶರ್ಮಿಷ್ಠ ಮುಖರ್ಜಿ ತಮ್ಮ ತಂದೆಯ ಬಗ್ಗೆ ಎದ್ದಿರುವ ವದಂತಿಯು ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ತನಗೆ ಪದೇ ಪದೇ ಕರೆ ಮಾಡದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಆಸ್ಪತ್ರೆಯಿಂದ ಕರೆ ಬರ್ತಿರುತ್ತದೆ. ಹಾಗಾಗಿ ಮೊಬೈಲ್ ಫ್ರೀಯಾಗಿರಬೇಕೆಂದು ಶರ್ಮಿಷ್ಠ ಹೇಳಿದ್ದಾರೆ.
ಆರ್ಮಿ ಆಸ್ಪತ್ರೆ ಕೂಡ ಅವ್ರ ಆರೋಗ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ಅದ್ರಲ್ಲಿ ಮುಖರ್ಜಿ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.