ಕೊರೊನಾ ವೈರಸ್ ಸೋಂಕಿನ ಭಯ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಈ ಕೊರೊನಾ ಶುರುವಾಗೋಕೂ ಮುನ್ನ ಇದ್ದ ರೀತಿಗೂ ಈಗಿನ ಜೀವನ ಶೈಲಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಸ್ವಾಬ್ ಟೆಸ್ಟ್, ಐಸೋಲೇಷನ್, ಕ್ವಾರಂಟೈನ್ಗಳ ಬಗ್ಗೆ ಹೆಚ್ಚಿನ ಮಂದಿಗೆ ಮಾಹಿತಿಯೇ ಇರಲಿಲ್ಲ.
ಆದರೆ ಕೆಲವರು ಬಾಬಿ ಡಿಯೋಲ್ಗೆ ಕೊರೊನಾ ಸೋಂಕು ದೇಶಕ್ಕೆ ಬರುವ ಮುನ್ಸೂಚನೆ ಮೊದಲೇ ಸಿಕ್ಕಿತ್ತು ಎಂದು ತಮಾಷೆಯಾಗಿ ಹೇಳ್ತಿದ್ದಾರೆ. ಅದರಲ್ಲೂ ಸಾಮಾಜಿಕ ಅಂತರ ಹಾಗೂ ಸ್ವ್ಯಾಬ್ ಟೆಸ್ಟ್ ಬಗ್ಗೆ ಬಾಬಿ ಡಿಯೋಲ್ ಅರಿತಿದ್ದರು ಎಂದು ಹೇಳಲಾಗ್ತಿದೆ.
ನೀವು ಸಿಕ್ಕಾಪಟ್ಟೆ ಗೊಂದಲಕ್ಕೆ ಒಳಗಾಗುವ ಮುನ್ನ ಜನರು ಈ ರೀತಿ ಹೇಳೋದಕ್ಕೆ ಕಾರಣ ಏನು ಅನ್ನೋದನ್ನ ಹೇಳ್ತೀವಿ. ಇತ್ತೀಚೆಗೆ ಬಾಬಿ ಡಿಯೋಲ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಂತಹದ್ದೊಂದು ಮಾತು ಹುಟ್ಟಿಕೊಂಡಿದೆ.
ಇಂಡಿಯನ್ ಮೀಮ್ಸ್ ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಾಬಿ ಡಿಯೋಲ್ ಸಾಮಾಜಿಕ ಅಂತರ ಕಾಪಾಡಿಕೊಂಡಿರೋದು, ಕ್ವಾರಂಟೈನ್ಗೆ ಒಳಗಾಗಿದ್ದು, ಮಾಸ್ಕ್ ಬಳಕೆ ಮಾಡಿರೋದು, ಸ್ವ್ಯಾಬ್ ಟೆಸ್ಟ್, ಹೀಗೆ ಸಾಕಷ್ಟು ದೃಶ್ಯಗಳಿವೆ. ಅಂದ ಹಾಗೆ ಈ ದೃಶ್ಯಗಳನ್ನ ಔರ್ ಪ್ಯಾರ್ ಹೋ ಗಯಾ ಸಿನಿಮಾದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಬಾಲಿವುಡ್ನಲ್ಲಿ ಈ ವಿಡಿಯೋವನ್ನ ಮೊದಲು ಶೇರ್ ಮಾಡಲಾಗಿದ್ದು ಸಖತ್ ವೈರಲ್ ಆಗಿದೆ.
https://www.instagram.com/p/CM9-1JVJ5Ui/?utm_source=ig_web_copy_link