ಗಣರಾಜ್ಯೋತ್ಸವ ದಿನಾಚರಣೆಗೆ ದಿನಗಣನೆ ಶುರುವಾಗಿದೆ. ದೆಹಲಿಯಲ್ಲಿ ನಡೆಯಲಿರುವ ಪರೇಡ್ನಲ್ಲಿ ಈ ಬಾರಿ ಉತ್ತರ ಪ್ರದೇಶ ಪ್ರಾಚೀನ ಅಯೋಧ್ಯೆಯ ಪರಂಪರೆ, ರಾಮ ಮಂದಿರದ ಪ್ರತಿರೂಪ, ಅಯೋಧ್ಯೆ ದೀಪೋತ್ಸವ ಹಾಗೂ ರಾಮಾಯಣದ ವಿವಿಧ ಕತೆಗಳ ಸ್ತಬ್ಧ ಚಿತ್ರ ಪ್ರದರ್ಶಿಸಲು ನಿರ್ಧರಿಸಿದೆ.
ಹಾಸಿಗೆಯ ಮೇಜಿನಲ್ಲಿ ಮಹರ್ಷಿ ವಾಲ್ಮೀಕಿ ಕುಳಿತುಕೊಂಡಿದ್ದರೆ ಹಿಂಬದಿಯಲ್ಲಿ ರಾಮಮಂದಿರದ ಪ್ರತಿಕೃತಿ ಇರಲಿದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಹೇಳಿದ್ದಾರೆ. ಇಬ್ಬರು ಮಹಿಳಾ ನರ್ತಕಿಯರು ಸೇರಿದಂತೆ ಕಲಾವಿದರ ಗುಂಪು ಈ ಟ್ಯಾಬ್ಲೋದಲ್ಲಿ ಭಾಗಿಯಾಗಲಿದ್ದು ಓರ್ವ ವ್ಯಕ್ತಿ ಶ್ರೀರಾಮನ ಪೋಷಾಕು ತೊಡಲಿದ್ದಾರೆ.
ದೆಹಲಿಯ ಕಂಟೋನ್ಮೆಂಟ್ನಲ್ಲಿ ನಡೆದ ಗಣರಾಜ್ಯೋತ್ಸವದ ಶಿಬಿರದಲ್ಲಿ ಒಟ್ಟು 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳ ಪೂರ್ವ ವೀಕ್ಷಣೆ ನಡೆಸಲಾಯ್ತು.
ರಾಮನ ರೂಪದಲ್ಲಿ ಅಜಯ್ ಕುಮಾರ್ ಪಾತ್ರ ನಿರ್ವಹಿಸಲಿದ್ದು, ಈ ಪಾತ್ರವನ್ನ ನಿರ್ವಹಿಸೋಕೆ ನಾವು ತುಂಬಾನೇ ಉತ್ಸುಕರಾಗಿದ್ದೇವೆ ಎಂದು ಹೇಳಿದ್ರು.