ನವದೆಹಲಿ: ಶಾಲಾ-ಕಾಲೇಜು ಆರಂಭಿಸುವಂತೆ ಏಮ್ಸ್ ತಜ್ಞರು ಶಿಫಾರಸು ಮಾಡಿದ್ದಾರೆ. ಮಕ್ಕಳು ಮನೆಯಿಂದ ಹೊರಬಂದರೆ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವುದರಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗಿದೆ.
ಶಾಲೆಗಳು ಆರಂಭವಾಗಬೇಕು, ಮಕ್ಕಳು ಮನೆಯಿಂದ ಹೊರಬಂದಲ್ಲಿ ಸಮೂಹ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ಏಮ್ಸ್ ಆಸ್ಪತ್ರೆಯ ತಜ್ಞರು ತಿಳಿಸಿದ್ದಾರೆ.
ಒಮ್ಮೆ ಸೋಂಕು ಏರುಗತಿ ಸ್ಥಿರವಾಗುತ್ತಿರುವಾಗ ಶಾಲೆಗಳನ್ನು ತೆರೆಯಲು ಅವಕಾಶ ನೀಡಬೇಕು. ಇದರಿಂದ ಸಮೂಹ ಸೋಂಕು ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನಲಾಗಿದೆ. ಆದರೆ ಕೊರೋನಾ ಸೋಂಕು ಹರಡುವ ಪ್ರಮಾಣ ಏರುಗತಿಯಲ್ಲಿ ಇರುವುದರಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಿದರೂ ಮಕ್ಕಳನ್ನು ಕಳುಹಿಸಲು ಪೋಷಕರು ಸಿದ್ಧವಾಗಿಲ್ಲ.